ವಿದೇಶದಲ್ಲೂ  ಶುರುವಾಯ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹವಾ…!

14-Mar-2019

ಚಂದನವನದಲ್ಲಿ ಅತೀ ಹೆಚ್ಚು ಫ್ಯಾನ್ಸ್ ಹೊಂದಿರುವ  ಸ್ಟಾರ್ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು.. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾಗಿರುವವರು ಕೂಡ ದರ್ಶನ್ ನ ಇಷ್ಟ ಪಡುತ್ತಾರೆ.. ಕಳೆದು ಸುಮಾರು ಒಂದು ವರ್ಷದಿಂದ ದರ್ಶನ್ ಅವರ ಯಾವುದೇ ಸಿನಿಮಾ ಬಿಡುಗಡೆಯಾಗಿರಲಿಲ್ಲ.. ಇದರಿಂದ ಅಭಿಮಾನಿಗಳು ಬೇಸರವನ್ನು ವ್ಯಕ್ತ ಪಡಿಸಿದ್ದರು.. ಯಾವಾಗ ಯಜಮಾನ ಬಿಡುಗಡೆ ಆಯ್ತೋ ಅವಾಗಿನಿಂದಲೇ ಶುರುವಾಯ್ತು ದರ್ಶನ್ ಹವಾ… ಎರಡು ವರ್ಷದ ಇನ್ ಕಮ್ ಅನ್ನು ಪೈಸಾ ವಸೂಲ್ ಎನ್ನುವ ರೀತಿಯಲ್ಲಿ ದೋಚಿಕೊಂಡಿದೆ.. ಯಜಮಾನನ ಶಿವನಂದಿಯನ್ನು ನೋಡಿ ಡಿ ಬಾಸ್ ಅಭಿಮಾನಿಗಳು ಸಖತ್ ಎಂಜಾಯ್ ಮಾಡಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ದಿನದಿಂದ ದಿನಕ್ಕೆ ಯಜಮಾನನ ದರ್ಬಾರ್ ಇನ್ನೂ ಜೋರಾಗ್ತಿದೆ.., ಇದೀಗ ವಿದೇಶದಲ್ಲೂ ಕೂಡ ಯಜಮಾನನ ಹವಾ ಪ್ರಾರಂಭವಾಗಿದೆ. ಯಜಮಾನ ಸಿನಿಮಾ ಬಾಕ್ಸಾಫೀಸ್​ನಲ್ಲಿ ಗೆಲುವಿನ ನಾಗಾಲೋಟವನ್ನು ಮುಂದುವರೆಸುತ್ತಿದೆ.. 

ಹೌದು.. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಶ್ಮಿಕಾ ಮಂದಣ್ಣ, ದೇವರಾಜ್, ಸಾಧು ಕೋಕಿಲ, ತಾನ್ಯಾ ಹೋಪ್, ರವಿಶಂಕರ್, ಠಾಕೂರ್ ಅನಝೂಪ್ ಸಿಂಗ್, ಡಾಲಿ ಧನಂಜಯರಂತಹ ಅದ್ಭುತ ಕಲಾವಿದರ ಸಂಗಮವೇ ಈ ಯಜಮಾನ.. ಮಾರ್ಚ್​ 1ಕ್ಕೆ 600ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಪ್ರೇಕ್ಷಕರ ಮುಂದೆ ಬಂದ ಯಜಮಾನ ಇದೀಗ ವಿದೇಶದಲ್ಲಿಯೂ ಕೂಡ ಬಿಡುಗಡೆ ಆಗಿದೆ..

ಆರಿಜೋನಾ, ಕ್ಯಾಲಿಫೋರ್ನಿಯಾ, ಕೊಲರಡೋ, ಫ್ಲೋರಿಡಾ, ನ್ಯೂ ಜೆರ್ಸಿ, ಪೆನ್ಸಿಲ್ವೇನಿಯಾ ಸೇರಿದಂತೆ 55ಕ್ಕೂ ಅಧಿಕ ಸ್ಥಳಗಳಲ್ಲಿ ಯಜಮಾನ ಸಿನಿಮಾವನ್ನ ಇಂಗ್ಲೀಷ್​ ಸಬ್​ ಟೈಟಲ್ಸ್ ಜೊತೆಗೆ ಕನ್ನಡದಲ್ಲೇ ರಿಲೀಸ್ ಮಾಡಲಾಗಿದೆ.. ನಿಧಾನವಾಗಿ ಓವರ್​ಸೀಸ್​ನಲ್ಲಿ ಕನ್ನಡ ಸಿನಿಮಾಗಳ ಮಾರುಕಟ್ಟೆ ವಿಸ್ತರಣೆಯಾಗ್ತಿದ್ದು, ಯಜಮಾನ ಸಿನಿಮಾ ಅದನ್ನ ಮತ್ತಷ್ಟು ಹೆಚ್ಚಿಸ್ತಿದೆ. ಒಟ್ಟಾರೆ ಲೇಟಾಗ್ ಬಂದ್ರು ಲೇಟೆಸ್ಟ್ ಆಗಿ ಬಂದೆ ಎನ್ನುವ ರೀತಿಯಲ್ಲಿ ಯಜಮಾನ ಮತ್ತೆ ಕಮ್ ಬ್ಯಾಕ್ ಮಾಡಿದ್ದಾನೆ.

 

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp