ಕಿಚ್ಚ ಅಭಿನಯದ ‘ಬಿಲ್ಲ ರಂಗ ಬಾಷ’ ಚಿತ್ರದ ಬಜೆಟ್​ ಎಷ್ಟು ಗೊತ್ತಾ..? ಕೇಳುದ್ರೆ ಶಾಕ್ ಆಗ್ತೀರಾ..!!

14-Mar-2019

ಸ್ಯಾಂಡಲ್ ವುಡ್ ನ ಅಭಿನಯ ಚರ್ಕವರ್ತಿ ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್’ನಲ್ಲಿ ಬರುತ್ತಿರುವ ‘ಬಿಲ್ಲ ರಂಗ ಬಾಷ’  ಸಿನಿಮಾ ಬರುತ್ತಿರುವುದು ಎಲ್ಲರಿಗೂ ಕೂಡ ತಿಳಿದೆ ಇದೆ.. ಈ ಸಿನಿಮಾ ಹೆಸರಲ್ಲಿಯೇ ಬಾರೀ ಕುತೂಹಲವನ್ನು ಕೆರಳಿಸಿದೆ.. ಈ ಸಿನಿಮಾದ ಬಜೆಟ್​ ಬಗ್ಗೆ ಗಾಂಧಿನಗರದಲ್ಲಿ ನ್ಯೂ ನ್ಯೂಸ್’ವೊಂದು ಹರಿದಾಡುತ್ತಿದೆ.. ಈ ವಿಚಾರ ಕೇಳಿ ಸುದೀಪ್​ ಅಭಿಮಾನಿಗಳು ಸಖತ್​ ಖುಷಿಯಾಗಿದ್ದಾರೆ. ದೊರಕಿರುವ ಮೂಲಗಳ ಪ್ರಕಾರ ಈ ಚಿತ್ರದ ಬಜೆಟ್​ ಬರೋಬ್ಬರಿ 75 ಕೋಟಿ ರೂಪಾಯಿಯಂತೆ.. ಈ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್​ ಸೀನ್ ಗಳು ಇವೆಯಂತೆ.. ಇದಕ್ಕಾಗಿಯೇ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮಿಡೀಯಾದಲ್ಲಿಯೇ ಚರ್ಚೆ ನಡೆಯುತ್ತಿದೆ.

ಸ್ಯಾಂಡಲ್’ವುಡ್ ನಲ್ಲಿ ಹೈ ಬಜೆಟ್ ಸಿನಿಮಾಗಳು ಬರುವುದು ತುಂಬಾನೇ ರೇರ್… ಇದೀಗ ‘ಬಿಲ್ಲ ರಂಗ ಭಾಷ’ ಚಿತ್ರಕ್ಕೆ ನಿರ್ಮಾಪಕರು 70 ಕೋಟಿ ರೂ ವೆಚ್ಚ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.. ಹಾಗಾಗಿ ಸಿನಿಮಾದ ಮೇಲಿನ ನಿರೀಕ್ಷೆಯು ಹೆಚ್ಚಾಗಿದೆ.. ಸಿನಿಮಾ ಪೋಸ್ಟರ್​ ಮೇಲೆ ‘ಒನ್ಸ್​ ಅಪಾನ್​ ಟೈಮ್​ ಇನ್​ 2209’ ಎನ್ನುವ ಟ್ಯಾಗ್ ಲೈನ್ ಇದೆ.. ಕ್ರಿಸ್ತಶಕ 2209ರಲ್ಲಿ ಸಿನಿಮಾದ ಕಥೆ ಸಾಗಲಿದೆ. ಹಾಗಾಗಿ, ಚಿತ್ರದಲ್ಲಿ ಭವಿಷ್ಯದ ಕಥೆ ಹೇಳುತ್ತಿರುವುದರಿಂದ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲು ಚಿತ್ರತಂಡ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ..

 “ದೊಡ್ಡ ಮಟ್ಟದಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಆದರೆ, ಅದಕ್ಕೆ ಇಷ್ಟೇ ಹಣ ವ್ಯಚ್ಛ ಮಾಡುತ್ತಿದ್ದೇವೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ ಚಿತ್ರದ ನಿರ್ದೆಶಕ. ಸುದೀಪ್​ ಸದ್ಯ, ‘ಪೈಲ್ವಾನ್​’, ‘ಕೋಟಿಗೊಬ್ಬ 3’, ‘ಸೈರಾ ನರಸಿಂಹ ರೆಡ್ಡಿ’, ‘ದಬಂಗ್​ 3’ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ..  ಈ ಎಲ್ಲ ಚಿತ್ರದ ಕೆಲಸಗಳು ಪೂರ್ಣಗೊಂಡ ನಂತರದಲ್ಲಿ ‘ಬಿಲ್ಲ ರಂಗ ಬಾಷ ’ ಸಿನಿಮಾ ಸೆಟ್ಟೇರಲಿದೆಯಂತೆ. ಸುದೀಪ್​ ಹೊರತುಪಡಿಸಿ ಮತ್ಯಾವ ಕಲಾವಿದರ ಆಯ್ಕೆಯೂ ಇನ್ನೂ ಅಂತಿಮಗೊಂಡಿಲ್ಲ.. ಭವಿಷ್ಯದ ಕಥೆ ಹೇಳುವ ಈ ಸಿನಿಮಾದ ಮೇಲೆ ಅಭಿಮಾನಿಗಳು ತುಂಬಾನೇ ಭರವಸೆ ಇಟ್ಟುಕೊಂಡಿದ್ದಾರೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp