ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಬಿಗ್ ಬಿ..!!

15-Mar-2019

ಸ್ಯಾಂಡಲ್ವುಡ್’ನಲ್ಲಿ ಪರ ಭಾಷೆಗೆ ನಾಯಕಿ ನಾಯಕಿಯರು ಸಿಂಗರ್ ಗಳು ಹೋಗುವುದು ಕಾಮನ್.. ಅಷ್ಟೆ ಅಲ್ಗ ನಮ್ಮ ಸ್ಯಾಂಡಲ್ ವುಡ್ ಗೂ ಕೂಡ ಪರ ಭಾಷಿಗರು ಕೂಡ ಎಂಟ್ರಿ ಕೊಟ್ಟಿದ್ದಾರೆ.. ಭಾಷೆ ಬರದೆ ಇದ್ದರು ಕೂಡ ಒಂದಲ್ಲ ಒಂದು ರೀತಿಯಲ್ಲಿ ಮ್ಯಾನೇಜ್ ಮಾಡುತ್ತಿರುತ್ತಾರೆ ನಾಯಕ ನಾಯಕಿರು… ಇದೀಗ ಬಾಲಿವುಡ್ ನ ದಿ ಮೋಸ್ಟ ಪಾಪ್ಯುಲರ್ ಆ್ಯಕ್ಷರ್ ಆದ ಬಿಗ್ ಬಿ ಅಮಿತಾಬ್ ಬಚ್ಚನ್ ಎಂಟ್ರಿ ಕೊಡುತ್ತಿದ್ದಾರೆ.. ಅರೇ ಹೌದಾ ಅಂತೀರಾ…? ಮುಂದೆ ಓದಿ ಯಾವ ಸಿನಿಮಾ ಅಂತ ನಿಮಗೆ ಗೊತ್ತಾಗುತ್ತದೆ..

ಬಿಗ್ ಬಿ ಅಮಿತಾಬ್ ಬಚ್ಚನ್‍ ಇದೀಗ ಕನ್ನಡ ಚಿತ್ರವೊಂದಕ್ಕೆ ಧ್ವನಿಯಾಗಿದ್ದಾರೆ. ಎಸ್ ಕನ್ನಡದ 'ಬಟರ್ ಫ್ಲೈ' ಚಿತ್ರದಲ್ಲಿ ಹಾಡೊಂದನ್ನು ಹಾಡಿದ್ದಾರೆ ಎಂದು ಚಿತ್ರದ ನಾಯಕಿ ಮತ್ತು ನಿರ್ಮಾಪಕಿ ಕೂಡಾ ಆಗಿರುವ ಪಾರುಲ್ ಯಾದವ್ ತಿಳಿಸಿದ್ದಾರೆ.1978 ರಲ್ಲಿ ತೆರೆ ಕಂಡಿದ್ದ ದೇವದಾಸಿ ಚಿತ್ರದ 'ಸುಖವೀವ ಸುರಪಾನವಿದು ಸ್ವರ್ಗ ಸಮಾನಮ್‍' ಎಂಬ ಹಾಡನ್ನು ಬಟರ್ ಫ್ಲೈ ಚಿತ್ರದಲ್ಲಿ ಮರು ಬಳಕೆ ಮಾಡಲಾಗ್ತಿದೆ. ಅಂದು ಜಿ.ಕೆ. ವೆಂಕಟೇಶ್‍ ಮ್ಯೂಜಿಕ್‍ನಲ್ಲಿ ಎಸ್‍ಪಿಬಿ ಈ ಹಾಡನ್ನು ಹಾಡಿದ್ದರು.

ಇದೀಗ ಅದೇ ಹಾಡನ್ನು ರ್ಯಾಪ್ ಶೈಲಿಯಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಡಿದ್ದಾರೆ ಎನ್ನಲಾಗಿದೆ. ಕನ್ನಡ ಮತ್ತು ತಮಿಳು ಭಾಷೆಯಲ್ಲಿ ನಿರ್ಮಾಣವಾಗ್ತಿರೋ ಈ ಚಿತ್ರವನ್ನು ರಮೇಶ್‍ ಅರವಿಂದ್ ನಿರ್ದೇಶನ ಮಾಡುತ್ತಿದ್ದಾರೆ.ಬಾಲಿವುಡ್‍ ಬಿಗ್ ಬಿ ಅಮಿತಾಬ್‍ ಬಚ್ಚನ್‍ ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೃತ ಧಾರೆ' ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ಅಭಿನಯಿಸಿದ್ದರು.. ಅಮಿತಾಬ್ ಧನಿಯಲ್ಲಿ ಬಟರ್ ಪ್ಲೈ ಗೀತೆ ಯಾವ ರೀತಿ ಮೂಡಿಬಂದಿರುತ್ತದೆ ಎಂಬುದನ್ನು ಇನ್ನೂ ಸ್ವಲ್ಪ ದಿನ ಕಾದು ನೋಡಲೇಬೇಕು..

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp