ದೊಡ್ಮನೆಯ ದೊಡ್ಮಗ ತಾಯಿ,ತಾಯ್ನಾಡಿನ ಬಗ್ಗೆ ಮಾತನಾಡಿದ್ದೇಕೆ ಗೊತ್ತಾ..?

16-Mar-2019

ಸ್ಯಾಂಡಲ್ ವುಡ್ನಲ್ಲಿ ಬಹು ಬೇಡಿಕೆಯ ನಟರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಒಬ್ಬರು..ಶಿವಣ್ಣ ತುಂಬಾ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವದ ವ್ಯಕ್ತಿ… ನಾಡು ನುಡಿ ಎಂಬ ಮಾತು ಬಂದಾಗ ಡಾ.ರಾಜ್ ಯಾವಾಗಲೂ ಮೊದಲು ಇರುತ್ತಿದ್ದರು.. ಇದೀಗ ಅವರ ಮಕ್ಕಳು ಕೂಡ ನಾಡು ನುಡಿ ವಿಚಾರದಲ್ಲಿ ಮೊದಲು ಇರುತ್ತಾರೆ… ಹ್ಯಾಟ್ರಿಕ್ ಹಿರೋ ಶಿವಣ್ಣ ತಾಯ್ನಾಡಿನ ಬಗ್ಗೆ ಮಾತನಾಡಿದ್ದಾರೆ.. ಯಾಕೆ ಅಂತಿರಾ ಮುಂದೆ ಓದಿ..

ಇತ್ತೀಚೆಗೆ ಸಾಮಾಜಿಕ ತಾಣದಲ್ಲಿ  ಕನ್ನಡದ ಟ್ರೈಲರ್​ ಒಂದು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ..ಆ ಟ್ರೈಲರ್ ಬೇರೆ ಯಾವುದು ಮಿಸ್ಸಿಂಗ್ ಬಾಯ್.. ಕಳೆದ ವಾರ ಮಿಸ್ಸಿಂಗ್ ಬಾಯ್ ಟ್ರೈಲರ್ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದರು. ಈ ಟ್ರೈಲರ್​ನಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರ ಕಂಠಸಿರಿ ಇದೆ. ಶಿವಣ್ಣ ಮಿಸ್ಸಿಂಗ್ ಬಾಯ್ ಸಿನಿಮಾದ ಟ್ರೈಲರ್​​ ನರೇಷನ್​ ಮಾಡಿದ್ದಾರೆ.. ಅಭಿನಯ ಚಕ್ರವರ್ತಿ, ಸುದೀಪ್ ಹಾರೈಸಿದಂತೆ  ಟ್ರೈಲರ್ ಮೆಚ್ಚುಗೆ ಗಳಿಸಿಕೊಂಡಿದೆ..

ಮೊದಲೇ ಹೇಳಿದ ಹಾಗೆ ಶಿವಣ್ಣ ನೆಲ, ಜಲ, ದೇಶ,ಭಾಷೆ ವಿಚಾರಕ್ಕೆ ಬಂದ್ರೆ ಯಾವಾಗಲೂ ಮುಂದೆ ಇರ್ತಾರೆ ಅನ್ನೋದು ಎಲ್ಲರಿಗೂ ಕೂಡ ತಿಳಿದೆ ಇದೆ.. ಹಾಗೆಯೇ ಈ ಚಿತ್ರದಲ್ಲಿ ಒಬ್ಬ ಹುಡುಗ ತಾಯಿ ಹಾಗೂ ತಾಯ್ನಾಡನ್ನ ಮಿಸ್​ ಮಾಡಿಕೊಳ್ಳೊ ಕಥೆ- ವ್ಯಥೆ ಇದೆ.. ಅದಕ್ಕೆ ಶಿವಣ್ಣನ ದನಿಯೇ ಸೂಕ್ತ ಅನ್ನೋದು ನಿರ್ದೇಶಕರ ಅಭಿಪ್ರಾಯವಾಗಿತ್ತು…  ಅಷ್ಟೆ ಅಲ್ಲದೆ ಶಿವಣ್ಣನ ದನಿಯಲ್ಲಿ ತಾಯಿ ತಾಯ್ನಾಡಿನ ಬಗ್ಗೆ ಮಾತು ಕೇಳಿದ್ರೆ ಒಂಥರಾ ಚೆಂದ ಅಂದುಕೊಂಡಿದ್ದಾರೆ. ಇನ್ನೂ ಫಸ್ಟ್ ರ್ಯಾಂಕ್ ರಾಜು ಗುರುನಂದನ್​​ ಬೆಳ್ಳಿತೆರೆ ಮೇಲೆ ಮಿಂಚಲು ಬರ್ತಿದ್ದಾರೆ.. ಇದೇ ತಿಂಗಳ 22ಕ್ಕೆ ಚಿತ್ರ ತೆರೆಗೆ ಬರುತ್ತಿದೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp