ಪವರ್ ಸ್ಟಾರ್ ಅಪ್ಪುಗೆ ಇರೋದು ಒಂದೆ ಆಸೆಯಂತೆ..! ಏನ್ ಗೊತ್ತಾ..?

18-Mar-2019

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನವನ್ನುಕಾಣುತ್ತಿದೆ.. ಇದೇ ಖುಷಿಯಲ್ಲಿರುವ ಪವರ್ ಸ್ಟಾರ್ ನೆನ್ನೆ ಅಷ್ಟೆ  ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡರು. .  ತಮಗೆ ವಿಶ್ ಮಾಡಿದ ಪ್ರತಿಯೊಬ್ಬರಿಗೂ ಕೂಡ ಪ್ರತ್ಯೇಕವಾಗಿ ಧನ್ಯವಾದವನ್ನು ಸಲ್ಲಿಸಿದ್ದಾರೆ ಪವರ್ ಸ್ಟಾರ್ ಅಪ್ಪು.. ಸದ್ಯ ಸ್ಯಾಂಡಲ್’ವುಡ್ ನ ಬಹುಬೇಡಿಕೆಯ  ನಟರಲ್ಲಿ ಪುನೀತ್ ರಾಜ್ ಕುಮಾರ್ ಕೂಡ ಒಬ್ಬರು.. ಅಪ್ಪು ಸಿನಿಮಾ ಅಂದ್ರೆ ಪಕ್ಕ ಪ್ಯಾಮಿಲಿ ಸಿನಿಮಾ ಅಂದರೆ ತಪ್ಪಾಗುವುದಿಲ್ಲ..

ಅಪ್ಪು ಇದೀಗ ತಮ್ಮ ಆಸೆಯೊಂದು  ಹೊರಹಾಕಿದ್ದಾರೆ. ಪುನೀತ್ ರಾಜ್ ಕುಮಾರ್ ಪ್ರೊಡಕ್ಷನ್ ಹೌಸ್ ನಲ್ಲಿ ನಿರ್ಮಾಣವಾದ ಮೊದಲ ಸಿನಿಮಾ 'ಕವಲು ದಾರಿ'.  ಈ ಸಿನಿಮಾದ ಟೀಸರ್, ಹಾಡು ಈಗಾಗಲೇ ಬಿಡುಗಡೆಯಾಗಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ಈ ಸಿನಿಮಾ ಏಪ್ರಿಲ್ 12 ರಂದು ರಿಲೀಸ್ ಆಗಲಿದೆ. ಈ ಸಿನಿಮಾವನ್ನು ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆ ಮಾಡುತ್ತಿದ್ದೇವೆ ಎಂದಿರುವ ಪುನೀತ್ ರಾಜ್ ಕುಮಾರ್ 'ವಿಶ್ವದಲ್ಲಿ ಕನ್ನಡಿಗರು ಎಲ್ಲೇ ಇದ್ರೂ ನಮ್ಮ ಕನ್ನಡ ಸಿನಿಮಾ ನೋಡಬೇಕು ಎಂಬುದೇ ನನ್ನ ಆಸೆ' ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಒಟ್ಟಾರೆಯಾಗಿ ಪುನೀತ್ ರಾಜ್ ಕುಮಾರ್ ಪ್ರೊಡಕ್ಷನ್ ಹೌಸ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದ ಮೇಲೆ ಸಾಕಷ್ಟು ಹೋಪ್ ಇದೆ ಎನ್ನಲಾಗಿದೆ.. ಈಸಿನಿಮಾದಲ್ಲಿ ಒಳ್ಳೆಯ ಕಥೆ ಇದೆ.. ವೀಕ್ಷಕರು ಈ ಸಿನಿಮಾವನ್ನು ನೋಡಿ ಆರ್ಶಿವಧಿಸಬೇಕು ಎಂದಿದ್ದಾರೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp