'ಕುರುಕ್ಷೇತ್ರ' ಸಿನಿಮಾಗೆ ಚುನಾವಣಾ ಆಯೋಗದಿಂದ ಸಿಕ್ತು ಗ್ರೀನ್‍ಸಿಗ್ನಲ್..!? ಬಿಡುಗಡೆ ಯಾವಾಗ ಗೊತ್ತಾ..?

22-Mar-2019

ಸ್ಯಾಂಡಲ್ ವುಡ್’ನಲ್ಲಿ ಬಹು ನಿರೀಕ್ಷಿತ ಸಿನಿಮಾವಾದ ಕುರುಕ್ಷೇತ್ರ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆಯೋ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. ಕುರುಕ್ಷೇತ್ರ ಸಿನಿಮಾದಲ್ಲಿ ನಿಖಿಲ್ ಕೂಡ ಅಭಿನಯಿಸಿದ್ದಾರೆ. ನಿಖಿಲ್ ಮಂಡ್ಯದ ಲೋಕಸಭಾ ಅಖಾಡದಿಂದ ಕಣಕ್ಕೆ ಇಳಿಯುತ್ತಿದ್ದಾರೆ.. ಹಾಗಾಗಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಸಿನಿಮಾ ಬಿಡುಗಡೆ ಆಗುವುದು ಸದ್ಯಕ್ಕೆ ಸಂಶಯ ಎನ್ನುವಂತಿತ್ತು. ಇದೀಗ ಸ್ಯಾಂಡಲ್‍ವುಡ್‍ನಲ್ಲಿ ಹವಾ ಕ್ರಿಯೇಟ್ ಮಾಡಿರುವ ಕುರುಕ್ಷೇತ್ರ ಚಿತ್ರದ ಬಿಡುಗಡೆಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಯಾವುದೇ ಕಲಾವಿದರು, ನಿರ್ಮಾಪಕರು, ನಿರ್ದೇಶಕರ ಚಿತ್ರಗಳನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂಬ ನಿಬಂಧನೆಗಳು ಇದ್ದವು.

ಈ ಬಾರಿ ಚುನಾವಣಾ ಆಯೋಗ ತಮ್ಮ ಈ ನಿಬಂಧನೆಯನ್ನು ಸಡಿಲಗೊಳಿಸಿದ್ದು, ಚುನಾವಣೆಗೂ, ಚಿತ್ರದ ಬಿಡುಗಡೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿರುವುದರಿಂದ ನಿರ್ಮಾಪಕರು ಸದ್ಯ ನಿಟ್ಟುಸಿರುಬಿಟ್ಟಿದ್ದಾರೆ. ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಪ್ರಕಾಶ್‍ರೈ, ಸುಮಲತಾ ಅಂಬರೀಷ್, ನಿಖಿಲ್‍ಕುಮಾರಸ್ವಾಮಿ ಸೇರಿದಂತೆ ಕೆಲವು ಕಲಾವಿದರು ಚುನಾವಣಾ ಕಣಕ್ಕೆ ಇಳಿದಿರುವುದರಿಂದ ಅವರು ನಟಿಸಿರುವ ಚಿತ್ರಗಳ ಬಿಡುಗಡೆ ಲೇಟಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಚುನಾವಣಾ ಆಯೋಗದ ನಿಲುವಿನಿಂದಾಗಿ ಚಿತ್ರಗಳ ನಿರ್ಮಾಪಕರು, ನಿರ್ದೇಶಕರು ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದಾರೆ.

ನಿರ್ಮಾಪಕ ಮುನಿರತ್ನಂ ಅವರು ನಿರ್ಮಿಸಿರುವ ಮುನಿರತ್ನ ಕುರುಕ್ಷೇತ್ರವನ್ನು ಏಪ್ರಿಲ್ 5 ರಂದು ರಿಲೀಸ್ ಮಾಡಲು ಫ್ಲ್ಯಾನ್ ಮಾಡಲು ಮುಂದಾಗಿದೆ. ಆದರೆ ಆ ಚಿತ್ರದಲ್ಲಿ ಅಭಿಮನ್ಯು ಪಾತ್ರದಲ್ಲಿ ನಟಿಸಿರುವ ನಿಖಿಲ್‍ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿದಿದ್ದರಿಂದ ಚಿತ್ರ ಬಿಡುಗಡೆ ತಡವಾಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಚುನಾವಣ ಆಯೋಗ ನೀತಿ ಸಂಹಿತೆ ನೀತಿಯನ್ನು ಜಾರಿಗೊಳಿಸಿರುವುದರಿಂದ ಯುಗಾದಿ ಹಬ್ಬದ ಸಂಭ್ರಮದಲ್ಲೇ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp