‘ಯುವರತ್ನ’ನ ನ್ಯೂಲುಕ್’ಗೆ ಅಭಿಮಾನಿಗಳು ಫಿದಾ..!!

23-Mar-2019

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾ ಅಂದ್ರೆ ಪಕ್ಕಾ ಫ್ಯಾಮಿಲಿ ಎಂಟರ್ಟ್ರೈಮೆಂಟ್ ಸಿನಿಮಾ ಅನ್ನೋದು ಎಲ್ಲರಿಗೂ ಕೂಡ.. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಜೊತೆಯಲ್ಲೆ ಕೂತು ನೋಡುವಂತ ಸಿನಿಮಾಗಳು.. ಚಂದನವನದಲ್ಲಿ ಬಹುಬೇಡಿಕೆಯ ನಟರಲ್ಲಿ ಅಪ್ಪು ಕೂಡ ಒಬ್ಬರು… ಇತ್ತಿಚಿಗೆ ನಟಸಾರ್ವಭೌಮ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು.. ಮೊನ್ನೆಮೊನ್ನೆಯಷ್ಟೆ ಬರ್ತಡೇಯನ್ನು ಆಚರಿಸಿಕೊಂಡಿದ್ದಾರೆ.. ಅಭಿಮಾನಿಗಳು ಪುನೀತ್ ಪ್ರೀತಿಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದರು.

ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಫ್ಯಾನ್ಸ್‌ಗೆ ಯುಗಾದಿ ಮುನ್ನವೇ ಹಬ್ಬ ಬಂದಂತಾಗಿದೆ. ಇದಕ್ಕೆ ಕಾರಣ ದಶಕದ ನಂತರ ಅಪ್ಪು ಮತ್ತೆ ಕಾಲೇಜ್ ಹುಡುಗನ ಗೆಟಪ್ ನಲ್ಲಿ ಕಾಣಿಸಿಕೊಳ್ತಿರೋದು. ಎಸ್.., ಪುನೀತ್ ನಟಿಸ್ತಿರೋ ಮತ್ತೊಂದು ಸಿನಿಮಾ ಅಂದರೆ ಅದು ಯುವರತ್ನ. ಯುವರತ್ನ ಚಿತ್ರದಲ್ಲಿ ‘ಪವರ್ ಸ್ಟಾರ್’ಲುಕ್ ಹೇಗಿರುತ್ತೆ ಅಂತಾ ನಿನ್ನೆ ಚಿತ್ರದ ನಿರ್ದೇಶಕ ಸಂತೋಷ್ ಆನಂದ್‌ರಾಮ್ ರಿವೀಲ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪುನೀತ್​ ಸ್ಟೈಲಿಶ್ ಆಗಿ ಬೈಕ್​ ಏರಿ ಬರ್ತಿರೋ ಫೋಟೋ ಅಪ್ಲೋಡ್ ಮಾಡಿ ಇದೇ ಯುವರತ್ನ ಗೆಟಪ್. ಯುವರತ್ನ 3ನೇ ಹಂತದ ಶೂಟಿಂಗ್ ಪ್ರಾರಂಭ ಅಂತಾ ಹೇಳಿದ್ದಾರೆ.

ಪುನೀತ್​ ಸ್ಟೂಡೆಂಟ್​ ಲುಕ್​ನಲ್ಲಿ ಹೇಗೆ ಕಾಣಿಸ್ತಾರೆ. ಯಾವ ಗೆಟಪ್​ನಲ್ಲಿರ್ತಾರೆ ಅನ್ನೋ ಕುತೂಹಲದಲ್ಲಿದ್ದ ಹೆಚ್ಚು ಮಾಡಿದೆ. ಪವರ್‌ಸ್ಟಾರ್ ತಮ್ಮ ಅಪ್ಪು , ಅಭಿ ಚಿತ್ರಗಳಲ್ಲಿ ಕಾಲೇಜ್‌ ಹುಡುಗನಾಗಿ ಅಭಿಮಾನಿಗಳ ಮನಗೆದ್ದಿದ್ದರು.. ಈಗ ಬರೋಬ್ಬರಿ 16 ವರ್ಷಗಳ ನಂತ್ರ ಮತ್ತೆ ಸ್ಟೈಲಿಶ್‌ ಲುಕ್ ನಲ್ಲಿ ಕಾಲೇಜ್‌ ಕುಮಾರನಾಗಿ ಎಂಟ್ರಿ ಕೊಡ್ತಿದ್ದಾರೆ. ಸಿನಿಮಾ ಬಿಡುಗಡೆಯಾಗಲೂ ಇನ್ನೂ ಸಾಕಷ್ಟು ಕಾಲಾವಕಾಶ ಬೇಕು.. ಅಲ್ಲಿಯವರೆಗೂ ಅಭಿಮಾನಿಗಳು ಅಪ್ಪು ಲುಕ್ ನೋಡುವುದಕ್ಕೆ ಕಾಯಲೇಬೇಕು..

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp