ಜಯಲಲಿತಾ ಸಿನಿಮಾದಲ್ಲಿ ಅಭಿನಯಿಸಲು ಕಂಗನಾ ರನಾವತ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ..?

25-Mar-2019

ಅಂದಹಾಗೇ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಜೀವನ ಇದೀಗ ಸಿನಿಮಾವಾಗಿ ರೂಪುಗೊಳ್ಳುತ್ತಿದೆ. ಎಷ್ಟೋ ಜನರಿಗೆ ಜಯಲಲಿತಾ ಜೀವನ ಕುರಿತಾಗಿ ತಿಳಿದುಕೊಳ್ಳುವ ಆಸಕ್ತಿಯಿದೆ. ಆಕೆ ನಡೆದು ಬಂದ ಮುಳ್ಳಿನ ಹಾದಿ ಸುಪತ್ತಿಗೆ ಹಾಗಿದ್ದೇಗೆ ಎನ್ನುವುದನ್ನು ತೆರೆ ಮೇಲೆ ತೋರಿಸಲು ನಿರ್ದೇಶಕರೊಬ್ಬರು ರೆಡಿಯಾಗಿದ್ದಾರೆ. ತಮಿಳರ ಆರಾಧ್ಯ ದೈವ ಜಯಲಲಿತಾ ಒಬ್ಬಾಕೆ ಕಲಾವಿದೆ ಎಂದು ಎಲ್ಲರಿಗೂ ಗೊತ್ತು. ಇಂದಿಗೂ ತಮಿಳುನಾಡಿನಲ್ಲಿ ಜಯಲಲಿತಾ ಅವರನ್ನು ಅಮ್ಮಾ ಎಂದೇ ಕರೆಯಲಾಗುತ್ತಿದೆ. ದಿವಂಗತ ಜಯಲಲಿತಾ ಕುರಿತಾದ ಆ ಬಯೋಪಿಕ್ ಇಂಟ್ರೆಸ್ಟಿಂಗ್ ಆಗಿದ್ದೂ, ಬಹಳ ಅಭಿಮಾನಿಗಳನ್ನು ಸೆಳೆಯಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗುತ್ತಿದೆ.

ಇದೀಗ ಆ ಸಿನಿಮಾದಲ್ಲಿ ಜಯಯಲಲಿತಾ ಪಾತ್ರ ಮಾಡಲಿರುವ ಬಾಲಿವುಡ್ ನಟಿ ಕಂಗನಾ ರನಾವತ್ ಪಡೆಯಲಿರುವ ಸಂಭಾವನೆ ಮೊತ್ತ ಕೇಳಿದರೆ ಎಲ್ಲರೂ ಬೆಚ್ಚಿ ಬೀಳುವುದು ಗ್ಯಾರಂಟಿ. ಕಂಗನಾ ಈ ಸಿನಿಮಾಗಾಗಿ 24 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರಂತೆ!

ಆ ಮೂಲಕ ಬಾಲಿವುಡ್ ನ ನಟಿಯರ ಪೈಕಿ ಗರಿಷ್ಠ ಸಂಭಾವನೆ ಪಡೆದ ನಟಿ ಎಂಬ ದಾಖಲೆಯನ್ನು ಕಂಗನಾ ಮಾಡಲಿದ್ದಾರೆ ಎಂಬ ವರದಿಗಳು ಬಂದಿವೆ. ಆದರೆ ಇದನ್ನು ಚಿತ್ರತಂಡ ಇನ್ನೂ ಕನ್ ಫರ್ಮ್ ಮಾಡಿಲ್ಲ. ಕಂಗನಾನೇ ಈ ಪಾತ್ರಕ್ಕೆ ಬೆಸ್ಟ್ ಎಂಬ ಪ್ರತಿಕ್ರಿಯೆ ಬರುತ್ತಿದ್ದು ಅವರನ್ನೇ ತರುವಲ್ಲಿ ಚರ್ಚೆ ನಡೀತಿದ್ಯಂತೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ಸವಾಲಿನ ಪಾತ್ರಮಾಡಿ ಸೈ ಎನಿಸಿಕೊಂಡಿರುವ ರನಾವತ್ ಜಯಲಲಿತಾ ಪಾತ್ರ ಮಾಡಬೇಕಾದರೆ ಸಾಕಷ್ಟು ತಯಾರಿ ನಡೆಸಬೇಕಾಗುವುದಂತೂ ನಿಜ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp