ಮತ್ತೆ ತೆರೆ ಮೇಲೆ ಒಂದಾಗ್ತಿದ್ದಾರೆ ಟಗರು ಜೋಡಿ…!!

26-Mar-2019

ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟರಲ್ಲಿ ಒಬ್ಬರು ಅಂದರೆ ಅದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.. ಶಿವಣ್ಣ ಸಿನಿಮಾ ಅಂದರೆ ಪೈಸಾ ವಸೂಲ್ ಎನ್ನುವ ರೀತಿಯಲ್ಲಿಯೇ ಇರುತ್ತವೆ.. ಟಗರು ಸಿನಿಮಾವನ್ನು ನೋಡಿದ ಅಭಿಮಾನಿಗಳು ಅವರ ಅಭಿನಯಕ್ಕೆ ಫುಲ್ ಫಿದಾ ಆಗಿದ್ದಂತೂ ಸುಳ್ಳಲ್ಲ.. ಶಿವಣ್ಣ ಮತ್ತು ಭಾವನ ಜೋಡಿಯನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡರು…ಸೂಪರ್ ಹಿಟ್ 'ಟಗರು' ಚಿತ್ರದ ನಂತರ ಶಿವರಾಜ್ ಕುಮಾರ್ ಮತ್ತು ಭಾವನಾ ಸಿನಿ ರಸಿಕರ ಫೇವರೆಟ್ ಜೋಡಿಯಾಗಿದ್ದಾರೆ. 'ಟಗರು' ಚಿತ್ರದಲ್ಲಿ ಮೋಡಿ ಮಾಡಿದ್ದ ಈ ಜೋಡಿ ಈಗ ಮತ್ತೆ ತೆರೆ ಮೇಲೆ ಒಟ್ಟಿಗೆ ಬರಲು ಸಿದ್ದತೆ ನಡೆಸುತ್ತಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾ 'ಮೈ ನೇಮ್ ಈಸ್ ಅಂಜಿ' ಮೂಲಕ ಹಿಟ್ ಜೋಡಿಯನ್ನು ಮತ್ತೆ ಒಟ್ಟಿಗೆ ಕರೆ ತರುತ್ತಿದ್ದಾರಂತೆ ಯಂಗ್ ನಿರ್ದೇಶಕ .ಹರ್ಷ. 'ಜಾಕಿ' ಚಿತ್ರದ ಮೂಲಕ ಕನ್ನಡ ಚಿತ್ರಪ್ರಿಯರಿಗೆ ಪರಿಚಿತರಾದ ಭಾವನಾ ಸದ್ಯ ಕನ್ನಡದ ಸೊಸೆಯಾಗಿ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

ಭಾವನಾ ಅವರನ್ನು ಮತ್ತೆ ಸೆಂಚುರಿ ಸ್ಟಾರ್ ಜೊತೆ ನೋಡುವುದು ಅಭಿಮಾನಿಗಳಿಗೆ ಖುಷಿ ತಂದಿದೆ.. ಈಗಾಗಲೇ ಶಿವಣ್ಣ ಮತ್ತು ನಿರ್ದೇಶಕ ಹರ್ಷ 'ಭಜರಂಗಿ' ಮತ್ತು 'ವಜ್ರಕಾಯ' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆಎರಡು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಜೋಡಿ ಈಗ ಹ್ಯಾಟ್ರಿಕ್ ಹಿಟ್ ಪಡೆಯಲು 'ಮೈ ನೇಮ್ ಈಸ್ ಅಂಜಿ' ಮೂಲಕ ಮತ್ತೆ ಬರುತ್ತಿದ್ದಾರೆ. ಈ ಸಿನಿಮಾವನ್ನು ನೋಡಲು ಸಿನಿ ಅಭಿಮಾನಿಗಳು ಇಷ್ಟು ಎಷ್ಟು ದಿನ ಕಾಯಬೇಕೋ ಗೊತ್ತಿಲ್ಲ.. ಒಟ್ಟಿನಲ್ಲಿ ಸಿನಿ ರಸಿಕರು ಮತ್ತೊಮ್ಮೆ ಶಿವಣ್ಣ ಮತ್ತು ಭಾವನ ಜೋಡಿಯನ್ನು ಕಣ್ತುಂಬಿಕೊಳ್ಳಬಹುದು…

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp