ಐಶ್ವರ್ಯ ಪ್ರಗ್ನೆಂಟ್ ಅಂತೆ…!! ಈ ಬಗ್ಗೆ ಮಾಜಿ ವಿಶ್ವ ಸುಂದರಿ ಹೇಳಿದ್ದೇನು ಗೊತ್ತಾ..?

26-Mar-2019

ಇತ್ತೀಚೆಗೆ ಮಾಜಿ ವಿಶ್ವ ಸುಂದರಿ ನಟಿ ಐಶ್ವರ್ಯ ರೈ ಅವರ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದವು. ಐಶು ಅಭಿಮಾನಿಗಳು ಖುಷ್ ಆಗಿದ್ದರು. ನಟಿ ಐಶ್ವರ್ಯ ಎರಡನೇ ಮಗುವಿಗೆ ತಾಯಿಯಾಗ್ತಿದ್ದಾರೆ, ವಿಶ್ರಾಂತಿಗಾಗಿ ಅಭಿಷೇಕ್ ಜೊತೆ ಕೂಲ್ ವೆದರ್ ನಲ್ಲಿ ಎಂಜಾಯ್ ಮಾಡ್ತಿದ್ದಾರೆ ಎಂದು ಅನ್ಕೊಂಡಿದ್ದ ಅಭಿಮಾನಿಗಳಿಗೆ ಇದೀಗ ಐಶು ನಿರಾಸೆ ಮಾಡಿದ್ದಾಳೆ. ಬೇಬಿ ಪಂಪ್ ಥರಾ ಇದ್ದ ಐಶು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಉಬ್ಬು ಹೊಟ್ಟೆಯಲ್ಲಿ ಐಶು ಥೇಟ್ ಗರ್ಭಿಣಿಯಂತೆ ಕಾಣುತ್ತಿದ್ದಳು.

ಮಾಜಿ ವಿಶ್ವ ಸುಂದರಿ ನಟಿ ಐಶ್ವರ್ಯ ರೈಗೆ ಈಗಾಗಲೇ ಒಂದಾದ ಮುದ್ದಾದ ಹೆಣ್ಣು ಮಗಳಿದ್ದಾಳೆ. ಅಮಿತಾಬ್ ಬಚ್ಚನ್ ಮನೆಯ ಮುದ್ದಿನ ಸೊಸೆಯಾಗಿ, ಅಭಿಷೇಕ್ ಬಚ್ಚನ್ ಅವರ ಪ್ರೀತಿಯ ಮಡದಿಯಾಗಿ ಸಂಸಾರ ನಡೆಸುತ್ತಿರುವ ಐಶ್ವರ್ಯ ಎರಡನೇ ಮಗುವಿಗೆ ತಾಯಿಯಾಗ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಂದಹಾಗೇ ಇದನ್ನು ಅವರೇ ಹೇಳಿದ್ದಾರಾ..? ಅಥವಾ ಬೇರೆ ಮೂಲಗಳಿಂದ ಬಂದಿರುವ ಸುದ್ದಿನಾ ಎಂದು  ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಈ ಫೋಟೋಗಳಿಗೆ ಅಭಿಮಾನಿಗಳಿಂದ ಭಾರೀ ರೆಸ್ಪಾನ್ಸ್ ಬಂದವು. ಆರಾಧ್ಯಗೆ ತಮ್ಮನೋ ತಂಗಿನೋ ಬರ್ತಾರೆಂದು ನಿರೀಕ್ಷಿಸುತ್ತಿದ್ದವರಿಗೆ ನಿರಾಸೆಯಾಗಿದೆ. ಗರ್ಭಿಣಿ ಎಂದು ಕರೆದವರಿಗೆ ಐಶು ಕಣ್ಣು ಕೆಂಪಗೆ ಮಾಡಿದ್ದಾಳೆ. ಸೋಶಿಯಲ್ ಮಿಡಿಯಾದಲ್ಲಿ ತನ್ನ ಫೋಟೋಗಳಿಗೆ ಬಂದ ಕಮೆಂಟ್ ನೋಡಿ ಸ್ವಲ್ಪ ರಾಂಗ್ ಆಗಿದ್ದಾರೆ ಬಿಗ್ ಬಿ ಸೊಸೆ. ಸದ್ಯಕ್ಕೆ ಐಶು ಗರ್ಭಿಣಿಯಂತೆ ಎಂಬ ವದಂತಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆ ಥರಾ ಏನೂ ಇಲ್ಲ, ಸುಮ್ಮನೇ ಫೋಟೋ ಗೆ ಕಮೆಂಟ್ ಮಾಡಬೇಡಿ.ನಾನು ಗರ್ಭಿಣಿ ಅಲ್ಲವೆಂದು ಪ್ರತಿಕ್ರಿಯೆ ನೀಡಿದ್ದಾರೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp