ಗೋಲ್ಡನ್ ಸ್ಟಾರ್’ಗೆ ಇಂದು ಸ್ಪೆಷಲ್ ದಿನ.!! ಯಾಕ್ ಗೊತ್ತಾ..?

27-Mar-2019

ನಮಸ್ಕಾರ ನಮಸ್ಕಾರ ನಮಸ್ಕಾರ ಅಂತಾನೇ ಫೇಮಸ್ ಆದ ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ಇಂದು ಸಂಭ್ರಮ..ಕಿರುತೆರೆಯಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮ ಮಾಡಿಕೊಂಡಿದ್ದ ಗಣೇಶ್ ಇಂದು ಗೋಲ್ಡನ್ ಸ್ಟಾರ್ ಗಣೇಶ್ ಆಗಿಬಿಟ್ಟಿದ್ದಾರೆ.. ಚೆಲ್ಲಾಟ ಸಿನಿಮಾದ ಮೂಲಕ ನಾಯಕನಟನಾಗಿ ಎಂಟ್ರಿಕೊಟ್ಟ ಗಣೇಶ್ ಲೇಡಿ ಫ್ಯಾನ್ಸ್ ಅನ್ನು ಹೆಚ್ಚಾಗಿಯೇ ಸಂಪಾದನೆ ಮಾಡಿದ್ದಾರೆ..

ಗೋಲ್ಡನ್ ಸ್ಟಾರ್ ಮನೆಯಲ್ಲಿಂದು ಸಂಭ್ರಮ ಮನೆ ಮಾಡಿದೆ. ಗಣೇಶ್, ಶಿಲ್ಪಾ-ಗಣೇಶ್ ದಂಪತಿ ಫುಲ್ ಖುಷಿಯಲ್ಲಿದ್ದಾರೆ. ಇಂದು ಅವರ ಪುತ್ರಿ ಚಾರಿತ್ರ್ಯ ಹುಟ್ಟುಹಬ್ಬ.ಗಣೇಶ್ ತಮ್ಮ ಮಗಳ ವಿಶೇಷ ಫೋಟೋಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಚಾರಿತ್ರ್ಯ ಮುದ್ಮುದ್ದಾಗಿ ಕಾಣಿಸುತ್ತಾರೆ. ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿಗೆ ಮಗಳು ಚಾರಿತ್ರ್ಯ ಹಾಗೂ ವಿಹಾನ್ ಎನ್ನುವ ಮಗನಿದ್ದಾನೆ. ಚಾರಿತ್ರ್ಯ ಈಗಾಗಲೇ 'ಚಮಕ್' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಾರಿತ್ರ್ಯ ಡ್ಯಾನ್ಸ್ ನಲ್ಲಿ ಸಿಕ್ಕಾಪಟ್ಟೆ ಫಾಸ್ಟ್ ಇದ್ದಾರೆ.

ನಟಿ ಅಮೂಲ್ಯ ಮದುವೆಯಲ್ಲಿ ಗಣೇಶ್ ಮಗಳು ಚಾರಿತ್ರ್ಯ ಹಾಕಿದ ಸ್ಟೆಪ್’ಗೆ ಅಲ್ಲಿ ಬಂದವರೆಲ್ಲಾ ಫಿದಾ ಆಗಿದ್ದರು.. ಚಮಕ್ ಸಿನಿಮಾದಲ್ಲಿ ಚಾರಿತ್ರ್ಯ ಅಭಿನಯಿಸಿದ್ದು, ಆಕೆಯ ಅಭಿನಯಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು.. ಇಂದು ಮಗಳ ಹುಟ್ಟುಹಬ್ಬಕ್ಕಾಗಿ ಟ್ವೀಟ್ಟರ್ ನಲ್ಲಿ ಪೋಟೋ ಹಾಕಿ ಶುಭಾಷಯ ತಿಳಿಸಿದ್ದಾರೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp