ಮತ್ತೆ ತೆರೆ ಮೇಲೆ ಬರಲು ರೆಡಿಯಾಗುತ್ತಿದೆ ಹಂಬಲ್ ಪೊಲಿಟಿಶಿಯನ್ ನೋಗರಾಜ್ ಸಿನಿಮಾ..!

27-Mar-2019

ಸ್ಯಾಂಡಲ್ವುಡ್ ನಲ್ಲಿ ವಿಚಿತ್ರ ಕಥಾ ಹಂದರವನ್ನು ಹೊಂದಿರುವ ಸಿನಿಮಾಗಳು ಸಾಕಷ್ಟಿವೆ.. ಆದರೆ ಅಭಿಮಾನಿಗಳಿಗೆ ಇಷ್ಟವಾಗುವುದು ಕೆಲವು ಸಿನಿಮಾಗಳು ಮಾತ್ರ..  ‘ಯಂಗ್ ಲೇಡಿ ನಂಗೆ ವೋಟ್ ಮಾಡಿ’….ಸಿನಿ ರಸಿಕರನ್ನು ಸೆಳೆಯುವ ಅರೆಬರೆ ಡೈಲಾಗ್​ಗಳು ಯಾವ ಸಿನಿಮಾದಲ್ಲಿವೆ ಅಂತಾ ಸ್ವಲ್ಪ ಯೋಚನೆ ಮಾಡಿದರೇ ನಮಗೆ ಮೊದಲು ನೆನಪಾಗೊದೇ ‘ಹಂಬಲ್ ಪೊಲಿಟಿಷಿಯನ್ ನೋಗರಾಜ್ ಸಿನಿಮಾ. ಈ ಸಿನಿಮಾವು 2018ರಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿತ್ತು.

ಹಂಬಲ್ ಪೊಲಿಟಿಷಿಯನ್ ನೋಗರಾಜ್ ಚಿತ್ರದಲ್ಲಿ ಡ್ಯಾನಿಷ್ ಸೇಟ್ ನಾಯಕನಾಗಿ ಕಾಣಿಸಿಕೊಂಡಿದ್ದರು... ಚಿತ್ರ-ವಿಚಿತ್ರವಾದ ಇಂಗ್ಲಿಷ್ ಹಾಗೂ ಕನ್ನಡ ಮಿಶ್ರಿತ ಡೈಲಾಗ್​ಗಳು ಸಿನಿರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು… ವ್ಯಂಗ್ಯ ಭಾಷೆಯ ಜೊತೆ ಒಂದೊಳ್ಳೆ ಸಂದೇಶವನ್ನು ಹೊತ್ತು  ಸಿನಿರಸಿಕರ ಮುಂದೆ ಬಂದಿತ್ತು.. ಪಾಲಿಕೆ ಸದಸ್ಯನೊಬ್ಬ ಶಾಸಕನಾಗಲು ಹೇಗೆಲ್ಲಾ ತನ್ನ ಹಗರಣಗಳನ್ನು ಮುಚ್ಚಿಹಾಕುತ್ತಾನೆ ಅನ್ನೋ ಕಥೆ ಹೊಂದಿದ್ದ ಸಿನಿಮಾ ಇಡೀದೇಶಾದ್ಯಂತ ಸಂಚಲನವನ್ನು ಮೂಡಿಸಿತ್ತು. ಇದೀಗ ಆ ಚಿತ್ರದ ಸೀಕ್ವೆಲ್ ರೆಡಿಯಾಗಿದ್ದು ಪಾರ್ಟ್-2 ನಲ್ಲಿ ಈ ಸಿನಿಮಾ ಮತ್ತೆ ತೆರೆ ಮೇಲೆ ಬರಲಿದೆ.. ಈಗಾಗಲೇ ಪಾರ್ಟ್ 2 ರ ಚಿತ್ರಕಥೆ ಸಿದ್ದವಾಗಿದ್ದು ಮೊದಲ ಸಿನಿಮಾ ಭಾಗದಲ್ಲಿ ನಿರ್ದೇಶನ ಮಾಡಿದ್ದ ಸಾದಾಖಾನ್, ಡ್ಯಾನಿಷ್ ಸೇಟ್​ ಜೊತೆಯಾಗಿ ಪಾರ್ಟ್-2 ಸಿನಿಮಾ ಮಾಡೋಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.. ಸದ್ಯ ಡ್ಯಾನಿಷ್ ಪುನಿತ್ ರಾಜ್​ಕುಮಾರ್ ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿದ್ದು ಚಿತ್ರ ಮುಗಿದ ಬಳಿಕ ನೋಗರಾಜ್​ಗೆ ಸಾರಥಿಯಾಗಲಿದ್ದಾರೆ. ಒಟ್ಟಾರೆಯಾಗಿ ಮತ್ತೊಮ್ಮೆ ಸಿನಿರಸಿಕರನ್ನು ನಗಿಸಲು ಅಷ್ಟೆ ಅಲ್ಲದೆ ಒಂದೊಳ್ಳೆ ಸಂದೇಶವನ್ನು ಹೊತ್ತು ತೆರೆಮೇಲೆ ಸಜ್ಜಾಗುತ್ತಿದೆ ಹಂಬಲ್ ಪೊಲಿಟಿಷಿಯನ್ ನೋಗರಾಜ್ ಸಿನಿಮಾ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp