ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮನಗೆದ್ದ ಸರಿಗಮಪ ಸ್ಪರ್ಧಿ..!!

28-Mar-2019

ಕನ್ನಡದ ರಿಯಾಲಿಟಿ ಷೋಗಳಲ್ಲಿ ಸರಿಗಮಪ ಕೂಡ ಒಂದು.. ಸರಿಗಮಪ ಈಗಾಗಲೇ ಸಾಕಷ್ಟು ಗಾಯಕ ಗಾಯಕಿರನ್ನು ಚಂದನವನಕ್ಕೆ ಪರಿಚಯ ಮಾಡಿದೆ.. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾಗಿರುವ ಪ್ರತಿಭೆಗಳನ್ನು ಕೂಡ ಇಲ್ಲಿ ಕಾಣಬಹುದು..ಮಕ್ಕಳ ಜೊತೆ ಮಕ್ಕಳಾಗುವ ಆ್ಯಂಕರ್ ಅನುಶ್ರೀ, ಅದೇ ರೀತಿ ಜಡ್ಜಸ್ ಗಳು ಎಲ್ಲವೂ ಕೂಡ ಸರಿಗಮಪ ರಿಯಾಲಿಟಿ ಷೋ ಗೆ ಮೇನ್ ಅಟ್ರ್ಯಾಕ್ಷನ್ ಎನ್ನಬಹುದು.. ಇದೀಗ 15 ಸೀಜನ್ಗಳನ್ನು ಮುಗಿಸಿ 16 ನೇ ಸೀಜನ್ ನಡೆಸುತ್ತಿದೆ..ಸೀಜನ್ 16 ರಲ್ಲಿ ರುಬೀನಾ ಎಂಬ ಹುಡುಗಿ ಇದೀಗ ಸಿಕ್ಕಾಪಟ್ಟೆ ಪೇಮನ್ ಆಗಿದ್ದಲ್ಲದೆ ಪುನೀತ್ ರಾಜ್ ಕುಮಾರ್ ಮನಗೆದ್ದಿದ್ದಾರೆ.. ಯಾಕೆ ಅಂತಿರಾ ಮುಂದೆ ಓದಿ ..

ಸರ್ಕಾರಿ ಶಾಲೆಯ ಯೂನಿಫಾರ್ಮ್ ತೊಟ್ಟುಕೊಂಡು ಜೀ ಕನ್ನಡ ಸರಿಗಮಪ ಲಿಟಲ್ ಚಾಂಪಿಯನ್ಸ್ ಶೋನಲ್ಲಿ ಹಾಡುವ ಸ್ಪರ್ಧಿ ರುಬೀನಾ ಎಂಬಾಕೆ ಬಗ್ಗೆ ಎಲ್ಲರಿಗೂ ಗೊತ್ತಿರಲೇಬೇಕು. ಈ ಹುಡುಗಿ ಇತ್ತೀಚೆಗೆ ಸರಿಗಮಪ ಕಾರ್ಯಕ್ರಮದಲ್ಲಿ ಪುನೀತ್’ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನಿಮಾದ 'ಬೊಂಬೆ ಹೇಳುತೈತೆ' ಹಾಡಿನ ದಾಟಿಯಲ್ಲಿ ತಮ್ಮ ಶಾಲೆಯ ಬಗ್ಗೆ ಹಾಡಿದ ವಿಡಿಯೋ ವೈರಲ್ ಆಗಿತ್ತು. ಆಕೆಯ ಹಾಡು ಕೇಳಿ ಈ ಹಾಡನ್ನು ಪವರ್ ಸ್ಟಾರ್ ಗೆ ಕೇಳಿಸಬೇಕು ಎಂದು ತೀರ್ಪುಗಾರರಾದ ವಿಜಯ್ ಪ್ರಕಾಶ್ ಹೇಳಿದ್ದರು.ಆ ಕೆಲಸವನ್ನು ಇದೀಗ ಜೀ ಕನ್ನಡ ಮಾಡಿದೆ. ರುಬೀನಾ ಜತೆಯಲ್ಲಿ ಕುಳಿತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಕೆ ಹಾಡಿದ ಹಾಡನ್ನು ಕೇಳಿದ್ದಾರೆ. ರುಬೀನಾ ಹಾಡು ಕೇಳಿ ತಮ್ಮ ಸಿನಿಮಾದ ಹಾಡೊಂದು ಈ ಮಟ್ಟಿಗೆ ಪ್ರೇರಣೆಯಾಗಿದ್ದು ನೋಡಿ ಸ್ವತಃ ಪುನೀತ್ ಖುಷಿಯಾಗಿದ್ದಾರೆ. ಅಷ್ಟೆ ಅಲ್ಲದೆ ಹಾಡು ಹಾಡಿದ ರುಬೀನಾರನ್ನು ಮೆಚ್ಚಿಕೊಂಡಿದ್ದಾರೆ. ಸರ್ಕಾರಿ ಶಾಲೆಯ ಸಮವಸ್ತ್ರ ತೊಟ್ಟು ಆಕೆ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದಾಳೆ..

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp