ಐನೂರು ಇಟ್ಟುಕೊಂಡು ಮುಂಬೈಗೆ ಬಂದಾಕೆ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಆಗ್ಬಿಟ್ಳು..!!

28-Mar-2019

ತನ್ನ ಹಾಟ್ ಮತ್ತು ಸೆಕ್ಸಿ ಲುಕ್ ನಿಂದಲೇ ಅಪಾರ ಸಂಖ್ಯೆಯ ಅಭಿಮಾನಿಗಳ ಮನಗೆದ್ದ ನಟಿ ದಿಶಾ ಪಟಾಣಿ  ಬಗ್ಗೆ ನಿಮಗೆ ಗೊತ್ತಿರದ ಸಂಗತಿಯೊಂದು ಇದೆ. ಮಾಡಿದ್ದು ಎರಡೇ ಸಿನಿಮಾ ಆದ್ರೂ ದಿಶಾ ಗೆ ಚಿತ್ರರಂಗದಲ್ಲಿ ಎಲ್ಲೆಲ್ಲಿದ  ಬೇಡಿಕೆ. ಇತ್ತೀಚಿಗೆ ಸಮ್ಮರ್ ಗಾಗಿ ಹಾಟ್ ಫೋಟೋ ಶೂಟ್ ಮಾಡಿಸಿ ಸುದ್ದಿಯಾಗಿದ್ದ ದಿಶಾ ಟಾಪ್ ನಟಿಯರ ಸಾಲಿನಲ್ಲಿ ನಿಲ್ಲುತ್ತಾಳೆ. ಕ್ಯೂಟ್ ಆ್ಯಕ್ಟಿಂಗ್ ನಿಂದ ನ್ಯಾಷನಲ್ ಕ್ರಶ್ ಟ್ಯಾಗ್ ಲೈನ್ ಹೊಂದಿರುವ ಈಕೆ ಬೋಲ್ಡ್ ಅಂಡ್ ಬ್ಯೂಟಿಫುಲ್… ಯಾವುದೇ ಸಿನಿಮಾ ಬ್ಯಾಗ್ರೌಂಡ್ ಇಲ್ದೇ ಸಿನಿಮಾ ರಂಗಕ್ಕೆ ಕಾಲಿಟ್ಟು ಟ್ಯಾಲೆಂಟೆಡ್ ನಟಿ ಎಂದು ಗುರುತಿಸಿಕೊಂಡವರು ದಿಶಾ. ಮಹೇದ್ರ ಸಿಂಗ್ ಧೋನಿ ಜೀವನಾಧಾರಿತ ಸಿನಿಮಾ M.S.DHONI ನಲ್ಲಿ ಚಾನ್ಸ್ ಸಿಕ್ಕಿತು.  ಧೋನಿ ಮೊದಲ ಪ್ರೇಯಸಿಯಾಗಿ ಪ್ರಿಯಾಂಕ ಪಾತ್ರದಲ್ಲಿ ಕಾಣಿಸಿಕೊಂಡ ದಿಶಾ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆದಳು.

ದಿಢೀರ್ ಅಂತಾ ಲಕ್ಷಗಟ್ಟಲೇ ಫ್ಯಾನ್, ಫಾಲೋಯರ್ಸ್ ಹೊಂದಿದ್ದ ಈಕೆ ಒಂದೇ ದಿನದಲ್ಲಿ 5 ಮಿಲಿಯನ್ ಫ್ಯಾನ್ಸ್ ಗಳಿಸಿದಳು. ದಿಶಾ ಆ್ಯಕ್ಟಿಂಗ್ ನೋಡಿ ಬಾಲಿವುಡ್ ಹಿರಿಯ ನಟರು, ನಿರ್ದೇಶಕರು ಹಾಡಿ ಹೊಗಳಿದರು. ಒಳ್ಳೆಯ ಮೆಚ್ಚುಗೆಗಳಿಸುವಲ್ಲಿ ದಿಶಾ ಯಶಸ್ವಿಯಾದಳು. ಅದಾಗಲೇ ಟೈಗರ್​ ಶ್ರಾಫ್​ ಜೊತೆ ಲವ್ವಿಡವ್ವಿ ಮಾತು ಶುರುವಾಗಿದ್ದ ಹಿನ್ನಲೆಯ ಫಲವಾಗಿ ಬಂದಿದ್ದೇ ಈ ಬಾಫೀ 2 ಚಿತ್ರ. ಅಂದಹಾಗೇ ಸಿನಿಮಾ ಸಕ್ಸಸ್ ಆಯ್ತು. ನಿರ್ಮಾಪಕ ಜೇಬು ತುಂಬಿತ್ತು. ದಿಶಾ ಸಂಭಾವನೆ ಕೂಡ ಏರಿಕೆಯಾಯ್ತು.

ಈಗ ಸಲ್ಮಾನ್​ ಖಾನ್​ ಅಭಿನಯದ ಭಾರತ್​ ಚಿತ್ರದಲ್ಲೂ ಈಕೆ ನಟಿಸುತ್ತಿದ್ದಾಳೆ. ಅಂದಹಾಗೇ ಈಕೆ ಸದ್ಯ ಕೋಟಿ ಕೋಟಿ ಹಣ ಬಾಚಿಕೊಳ್ಳುತ್ತಿದ್ದಾಳೆ. ಆದರೆ ಮುಂಬೈ ಬಂದಾಗ ಈಕೆಯ ಕೈಯಲ್ಲಿದ್ದುದ್ದ ಕೇವಲ 500 ರೂ ಅಷ್ಟೇ ಅಂತೆ. ಆದರೆ ತನ್ನ ಶ್ರಮದಿಂದ ತಾನು ಯಶಸ್ಸು ಕಂಡೆ ಎನ್ನುತ್ತಾಳೆ ಈಕೆ. ಸದ್ಯ  ಬೆಂಜ್​, ಆಡಿ ಸೇರಿ ರೆಂಜ್​ ರೋವರ್​ ಅಂತ ದುಬಾರಿ ಕಾರ್​ಗಳ ಒಡತಿ ಕೂಡ ಹೌದು. ಟೈಗರ್ ಶ್ರಾಫ್ ಜೊತೆ ದಿಶಾ ಎಂಗೇಜ್ ಆಗಿದ್ದಾಳೆ. ಪ್ರೇಮಿಗಳ ದಿನದಂದೇ ಇವರಿಬ್ಬರ ಪ್ರೇಮದಾಂಕುರವಾಗಿದ್ಯಂತೆ. ಒಟ್ಟಾರೆ ತಮ್ಮ ಲವ್ವಿನ ವಿಚಾರವಾಗಿ ತಾವೇ ಬಹಿರಂಗವಾಗಿ ಹೇಳಿಕೊಂಡಿದ್ದರು.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp