ಜೋಗಿ ಪ್ರೇಮ್‌ ಹೊಸ ಚಿತ್ರ..! ಮಾರ್ಚ್ 31ಕ್ಕೆ ಟೈಟಲ್‌, ಫಸ್ಟ್‌ಲುಕ್ ರಿಲೀಸ್..!

29-Mar-2019

ಜೋಗಿ ಸಿನಿಮಾ ಸೂಪರ್ ಡೂಪರ್ ಹಿಟ್ ಸಿನಿಮಾ ಆಯ್ತು… ಇದೀಗ ಜೋಗಿ ಪ್ರೇಮ್ ಮತ್ತೊಂದು ಸಿನಿಮಾಗಾಗಿ ಕೈ ಹಾಕುತ್ತಿದ್ದಾರೆ.. ಅದು ಬೇರೆ ಯಾವ ಹೀರೋ ಗೂ ಕೂಡ ಅಲ್ಲ… ತನ್ನ ಭಾಮೈದುನನಿಗಾಗಿ… ಅಂದರೆ ರಕ್ಷಿತಾ ತಮ್ಮನಿಗಾಗಿ… ರಕ್ಷಿತಾ ಸಹೋದರ ಅಭಿಷೇಕ್ ರಾವ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡೋಕೆ ಈಗಾಗಲೇ ಸಜ್ಜಾಗಿದ್ದಾರೆ. ಅಭಿಷೇಕ್‌ಗಾಗಿ ಪ್ರೇಮ್ ಸಿನಿಮಾ ಮಾಡಲಿದ್ದು,  ಮಾರ್ಚ್ 31ರಂದು ಈ ಹೊಸ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್‌ ರಿಲೀಸ್ ಮಾಡಲು ನಿರ್ಧಾರ ಮಾಡಿದ್ದಾರೆ.

ರಕ್ಷಿತಾ ಪ್ರೇಮ್ ಹುಟ್ಟುಹಬ್ಬ 31ನೇ ತಾರೀಖು ಇದೆ.. ಅಕ್ಕನ ಬರ್ತ್‌ಡೇ ಖುಷಿಯಲ್ಲೇ ತಮ್ಮ ಅಭಿಷೇಕ್ ಸಿನಿಜರ್ನಿ ಪ್ರಾರಂಭ ಮಾಡಲಿದ್ದಾರೆ ಹಾಗೆ ನೋಡಿದ್ರೆ ಅಭಿಷೇಕ್‌ಗೆ ನಟನೆ ತೀರ ಹೊಸದೇನಲ್ಲ. ಅಭಿಷೇಕ್‌ ರಾವ್‌ ಈಗಾಗಲೇ ಬಣ್ಣ ಹಚ್ಚಿದ್ದು ಆಗಿದೆ. ‘ವಿಲನ್‌’ ಚಿತ್ರದಲ್ಲಿನ ಒಂದು ಹಾಡಿನಲ್ಲಿ ಅವರು ಕಾಣಿಸಿಕೊಂಡಿದ್ದರು. ಪೂರ್ಣ ಪ್ರಮಾಣದ ನಟರಾಗಿ ಈಗ ಗ್ರ್ಯಾಂಡ್ ಆಗಿಯೇ ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. ಅಭಿಷೇಕ್ ವಿದೇಶದಲ್ಲಿ ನಟನೆ ಹಾಗೂ ಡ್ಯಾನ್ಸ್ ತರಬೇತಿ ಪಡೆದುಕೊಂಡು ಬಂದಿದ್ದು ಹೀರೋ ಆಗೋಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ...

ಆಗ ನಟಿ ಸುಧಾರಾಣಿ ಪುತ್ರಿ ಅಭಿಷೇಕ್​​​ಗೆ ನಾಯಕಿಯಾಗಿ ಮೊದಲ ಬಾರಿಗೆ ಬಣ್ಣ ಹಚ್ಚುತ್ತಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಕೇಳಿ ಬರುತ್ತಿತ್ತು.. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಪ್ರೇಮ್ ‘ನಾನಿನ್ನೂ ನಾಯಕಿಯ ಆಯ್ಕೆ ಮಾಡಿಲ್ಲ. ಆದರೆ ಈ ಬಾರಿ ಪಕ್ಕಾ ಕನ್ನಡದ ಹೊಸ ಮುಖಕ್ಕೆ ಅವಕಾಶ ನೀಡುತ್ತೇನೆ’ ಎಂದಿದ್ದಾರೆ. ಸಿನಿಮಾದ ಟೈಟಲ್ ತಿಳಿದುಕೊಳ್ಳುವುದಕ್ಕೆ ಮಾರ್ಚ್ 31 ವರೆಗೆ ಕಾಯಲೇ ಬೇಕು..

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp