ವೀರ ಮದಕರಿ ನಾಯಕಿ ರಾಗಿಣಿ ಅರೆಸ್ಟ್..!!

30-Mar-2019

ನಟಿ ರಾಗಿಣಿ  ಕೈಗೆ ಕೋಳ ಬಿದ್ದಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಸ್ವಲ್ಪ ದಿನಗಳ ಹಿಂದೆ ಹೋಟೆಲ್ ಒಂದರಲ್ಲಿ ಮಾಜಿ ಮತ್ತು ಹಾಲಿ ಪ್ರೇಮಿಗಳ ಕಿತ್ತಾಟಕ್ಕೆ ಕಾರಣರಾದ ನಟಿ ರಾಗಿಣಿ ಜೈಲಿಗೆ ಹೋಗಿದ್ದರಾ..? ಸ್ವಲ್ಪ ದಿನಗಳ ಹಿಂದೆ ಹಾಲಿ ಸ್ನೇಹಿತನೊಟ್ಟಿಗೆ ಹೋಟೆಲ್ ಗೆ ಹೋಗಿದ್ದ ರಾಗಿಣಿಯನ್ನು ಕಂಡು ಮಾಜಿ ಗೆಳೆಯ , ರಾಗಿಣಿ ಜೊತೆಗಿದ್ದವನ ಮೇಲೆ ಹಲ್ಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ರಾಗಿಣಿ ಸ್ಥಳದಲ್ಲಿಯೇ ಇದ್ದರು ಎಂದು ಕೆಲ ಮೂಲಗಳು ಹೇಳಿದ್ದರೂ ಕೂಡ  ಈ ಬಗ್ಗೆ ಯಾವುದೇ ಸ್ಪಷ್ಟನೆ ಇರಲಿಲ್ಲ. ಆ ವಿಚಾರವಾಗಿಯೇ ರಾಗಿಣಿ ಜೈಲಿಗೆ ಹೋಗಿದ್ದಾರಾ ಎಂದು ಯೋಚಿಸ್ತಿದ್ರೆ ಅದು ತಪ್ಪು. ಹೌದು ರಾಗಿಣಿ ಕೈಗೆ ಕೋಳ ಬಿದ್ದಿರೋದು ನಿಜ. ಜೈಲಿಗೆ ಹೋಗಿದ್ದು ನಿಜವೇ ಆದರೆ ರಿಯಲ್ ಲೈಫ್ ನಲ್ಲಿ ಅಲ್ಲ, ರೀಲ್ ನಲ್ಲಿ.

ರಾಗಿಣಿ ಅರೆಸ್ಟ್ ಅಂದಾಕ್ಷಣ ತುಪ್ಪದ ಬೆಡಗಿ ಫ್ಯಾನ್ ಗಳು ಬೆಚ್ಚಿ ಬಿದ್ದಿರ ಬೇಕು. ಹೋಟೆಲ್ ಗಲಾಟೆಯಲ್ಲಿ ನಟಿ ರಾಗಿಣಿ ಕೈವಾಡವಿರಬಹುದು ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಆದರೆ ರಾಗಿಣಿ ಸಿನಿಮಾವೊಂದರಲ್ಲಿ ಬ್ಯುಸಿಯಾಗಿದ್ದಾರೆ. ‘ಗಾಂಧಿಗಿರಿ’ಯಲ್ಲಿ ರಾಗಿಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಂದ್ಹಾಗೆ ರಾಗಿಣಿ ಕೈಗೆ ಕೋಳ ಹಾಕಿಸಿಕೊಂಡಿರೋದು ಇದೇ ಸಿನಿಮಾಗಾಗಿ. ರಾಗಿಣಿ ಅರೆಸ್ಟ್ ಆಗುವ ದೃಶ್ಯವೊಂದು ಸಿನಿಮಾದಲ್ಲಿದೆ. ಈ ಫೊಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ರಾಗಿಣಿ ಅರೆಸ್ಟ್ ಆಗಿ ಹೋದ್ರಾ ಎಂದು ಅಭಿಮಾನಿಗಳು ಅಭಿಪ್ರಾಯಿಸಿ ಬಿಟ್ಟಿದ್ದಾರೆ. ಏಕೆಂದರೆ ಹೋಟೆಲ್ ಗಲಾಟೆ ನಡೆದು ಕೆಲವೇ ದಿನಗಳಷ್ಟೇ ಆಗಿದ್ದು. ಆ ವಿಚಾರವಾಗಿ ಏನು ಪ್ರತಿಕ್ರಿಯಿಸದೇ ನಾಪತ್ತೆಯಾಗಿದ್ದ ರಾಗಿಣಿಯ ಫೋಟೋ ಈ ರೂಪದಲ್ಲಿ ಹರಿದಾಡ್ತಿದ್ದರೇ ಜನರ ಅನ್ಕೊಳ್ಳದೇ ಏನ್ ಮಾಡ್ತಾರೆ ನೀವೆ ಹೇಳಿ.. ಆದರೆ ಇದು ಗಾಂಧಿಗಿರಿ ಸಿನಿಮಾದ ಸ್ಟಿಲ್ ಫೋಟೋ. ಈ ಸಿನಿಮಾದಲ್ಲಿ ಲೀಡ್ ಪಾತ್ರದಲ್ಲಿ ಕಾಣಿಸಿಕೊಳ್ತಿರುವ ರಾಗಿಣಿ ಜೈಲಿಗೆ ಹೋಗೋ ಸೀನ್ನಲ್ಲಿ ನಟಿಸ್ತಾ ಇದ್ದಾರೆ, ಆ ಫೋಟೋವೇ ಇದು. ರಾಗಿಣಿ ಅಭಿಮಾನಿಗಳು ಭಯಪಡೋಈ ಅಗತ್ಯವಿಲ್ಲ. ಹೋಟೆಲ್ನಲ್ಲಿ ನಡೆದ ಮಾಜಿ-ಹಾಲಿ ಪ್ರೇಮಿಗಳ ಜಗಳ ಪೊಲೀಸರಿಂದ ತನಿಖೆಗೆ ಒಳಪಟ್ಟಿದೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp