ಕನ್ನಡ ಸಿನಿಮಾ ಇಂಡಸ್ಟ್ರಿ ಕೇವಲ ಮೂರ್ನಾಲ್ಕು ಸ್ಟಾರ್​ಗಳಿಗೆ  ಸೀಮಿತವಲ್ಲ..! ಹೀಗೆ ಹೇಳಿದ್ದು ಯಾರ್ ಗೊತ್ತಾ..?

03-Apr-2019

ಸಿನಿಮಾ ಅಂದ ಮೇಲೆ ಏಳು ಬೀಳು ಇರುವುದು ಕಾಮನ್… ಅದೃಷ್ಟ ಅನ್ನುವುದು ಬಣ್ಣದ ಲೋಕದಲ್ಲಿ ಕೈ ಹಿಡಿಯುವುದು ಸ್ವಲ್ಪ ಕಷ್ಟವೇ ಸರಿ… ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನ ಆಳಿದವೆರಲ್ಲಾ ಇಂದು ಹೆಸರೇ ಇಲ್ಲದಂತೆ ಆಗಿದ್ದಾರೆ ಎನ್ನುವುದು ಕೆಲವರ ವಾದವಾಗಿದೆ.. ಅದೇ ರೀತಿ ಸ್ಯಾಂಡಲ್ ವುಡ್ ನ ನಟರೊಬ್ಬರು ಆ ವಿಷಯವಾಗಿ ಮಾತನಾಡಿದ್ದಾರೆ.. ನವರಸ ನಾಯಕ ಜಗ್ಗೇಶ್  ಅಭಿನಯದ ಪ್ರೀಮಿಯರ್ ಪದ್ಮಿನಿ ಚಿತ್ರ ಬಿಡುಗಡೆಯಾಗುತ್ತಿದೆ.ಇದೇ ತಿಂಗಳು 26ಕ್ಕೆ ತೆರೆಮೇಲೆ ರಂಜಿಸೋಕೆ ಬರುತ್ತಿದ್ದಾರೆ. ಪ್ರೀಮಿಯರ್ ಪದ್ಮಿನಿ ಚಿತ್ರದ ಟ್ರೈಲರ್ ಲಾಂಚ್‌ ವೇಳೆ ಜಗ್ಗೇಶ್ ತಮ್ಮ ನೋವನ್ನ ಹೇಳಿಕೊಂಡರು....

ನಾನು ನಾಯಕನಟನಾಗಿದ್ದೆ  ಆಗಿದ್ದೆ ನನ್ನ ದುಡ್ಡಲ್ಲಿ. 90ನೇ ಇಸವಿಯಿಂದ ಸಿನಿಮಾ ನಡಾವಳಿಗಳನ್ನ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಈಗ ಪರಿಸ್ಥಿತಿ ನೋಡಿ ಹೇಗಿದೆ ಅಂತ. ಪ್ರೇಕ್ಷಕ ಮಹಾಪ್ರಭುಗಳಲ್ಲಿ ನನ್ನ ವಿನಂತಿ ಏನಂದ್ರೆ, ಕನ್ನಡ ಫಿಲ್ಮ್ ಇಂಡಸ್ಟ್ರಿ ಕೇವಲ 3-4 ಜನಕ್ಕಷ್ಟೇ ಸೀಮಿತ ಮಾಡಿಕೊಂಡ್ರೆ ಕಷ್ಟವಾಗುತ್ತೆ. ಸಣ್ಣ ಬಜೆಟ್‌ ನವರೇ ಆಗಲಿ. ದೊಡ್ಡ ಬಜೆಟ್‌ನವರೇ ಆಗಲಿ. ಕೆಲವರಿಗಷ್ಟೇ ಸೀಮಿತವಾಗೋದು ಬೇಡ. ಪ್ರೇಕ್ಷಕರ ಹೃದಯ ದೊಡ್ಡದಾಗಬೇಕು. ಉತ್ತಮ ಕೃತಿಯನ್ನ ಕೈಹಿಡಿಬೇಕು. ತೆರೆದ ಮನಸ್ಸಿನಿಂದ ಹೊಸಬರನ್ನ ಒಪ್ಪಿಕೊಳ್ಳಬೇಕು ಎಂದು ಜಗ್ಗೇಶ್ ತಮ್ಮ ಮನದಾಳದ ಮಾತನ್ನು ಹೇಳಿಕೊಂಡರು.. ಹೊಸಬರ ಸಿನಿಮಾವನ್ನು ನೋಡಿ ಹಾರೈಸಿ, ಕೇವಲ ಮೂರು ನಾಲ್ಕು ಜನಕ್ಕೆ ಮಾತ್ರ ಸಿನಿಮಾ ಇಂಡಸ್ಟ್ರಿಯನ್ನು ಸೀಮಿತ ಮಾಡಬೇಡಿ.. ಎಲ್ಲರು ಸಾಕಷ್ಟು ಕನಸುಗಳನ್ನು ಇಟ್ಟಿಕೊಂಡು ಸಿನಿಮಾ ಮಾಡಿರುತ್ತಾರೆ. ಎಲ್ಲರನ್ನೂ ಪ್ರೋತ್ಸಾಹಿಸಿ ಎಂದರು.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp