ರೆಬಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಮಗನ ‘ಅಮರ್’ ಸಿನಿಮಾ ಬಿಡುಗಡೆ..​!

03-Apr-2019

ಸ್ಯಾಂಡಲ್ ವುಡ್ ನ ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅಭಿನಯದ  ಅಮರ್ ಸಿನಿಮಾದ ಟೀಸರ್ ಅನ್ನು ಈಗಾಗಲೇ ಅಭಿಮಾನಿಗಳು ನೋಡಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.ಅಂಬಿ ಅಭಿಮಾನಿಗಳು ಜ್ಯೂನಿಯರ್ ರೆಬಲ್ ಸ್ಟಾರ್ ಅಂತಾನೇ ಅಭಿಷೇಕ್ ಅವರನ್ನು ಕರೆಯುವುದಕ್ಕೆ ಶುರು ಮಾಡಿದ್ದಾರೆ.. ಅಭಿಷೇಕ್ ಸದ್ಯ ಸಿನಿಮಾ ಚಿತ್ರಿಕರಣವನ್ನೆಲ್ಲಾ ಮುಗಿಸಿ ಅಮ್ಮನ ಜೊತೆ ಚುನಾವಣ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ.ನಾಗಶೇಖರ್ ನಿರ್ದೇಶನದಲ್ಲಿ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಾಯಕನಾಗಿ ನಟಸಿರೋ ಮೊದಲ ಸಿನಿಮಾ ಅಮರ್​, ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್​ ಕೆಲಸವನ್ನು ಮುಗಿಸುವ ಹಂತದಲ್ಲಿದೆ. ರೆಬಲ್ ಸ್ಟಾರ್ ಸ್ಟೈಲ್’ನಲ್ಲಿಯೇ  ನೋ.. ವೇ.. ಚಾನ್ಸೇ ಇಲ್ಲಾ ಅಂತಾ ಡೈಲಾಗ್ ಹೊಡೆದು ಅಭಿಮಾನಿಗಳ ಮನಗೆದ್ದಿದ್ದ ಅಭಿಷೇಕ್ ಲವರ್ ಬಾಯ್ ಲುಕ್​ನಲ್ಲಿ ಟೀಸರ್’ನಲ್ಲಿಯೇ ಸಖತ್ತಾಗಿಯೇ ಮಿಂಚಿದ್ದರು. ಚಿತ್ರತಂಡ ಇದೀಗ ಅಂಬರೀಶ್​ ಹುಟ್ಟುಹಬ್ಬಕ್ಕೆ ಬಂಪರ್ ಗಿಫ್ಟ್ ಸಿದ್ದ ಮಾಡಿಕೊಂಡಿದ್ಯೆಯಂತೆ.

ಮೇ ತಿಂಗಳ 29 ಕ್ಕೆ ಅಂಬರೀಶ್ ಹುಟ್ಟುಹಬ್ಬವಿದ್ದು ಆ ಪ್ರಯುಕ್ತ ಅಂಬಿಗೆ ಉಡುಗೊರೆಯಾಗಿ ಅಮರ್ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದ್ದು ಮೇ ತಿಂಗಳ ಕೊನೆಯ ವಾರದಲ್ಲಿ ತೆರೆಕಾಣಲಿದೆ. ಈಗಾಗಲೇ ಅಭಿ ಹಾಗೂ ತಾನ್ಯಹೋಪ್ ಜೋಡಿ ತೆರೆ ಮೇಲೆ ಸಖತ್ ವರ್ಕೌಟ್ ಆಗಿರೋದು ಟೀಸರ್ ನಲ್ಲಿ ಕಾಣಿಸುತ್ತಿದೆ. ಲವರ್ ಬಾಯ್ ಜೊತೆಗೆ ಮಾಸ್ ಲುಕ್​ನಲ್ಲಿ ಯಂಗ್ ರೆಬಲ್ ಸ್ಟಾರ್ ಅಬ್ಬರಿಸಲಿದ್ದಾರೆ. ಈ ಸಿನಿಮಾ ಅಂಬರೀಶ್ ಅವರ ಹುಟ್ಟುಹಬ್ಬದ ವೇಳೆ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಖುಷಿಯನ್ನು ತಂದಿದೆ. ಇನ್ನು ಚಿತ್ರದಲ್ಲಿ ದೇವರಾಜ್, ಸುಧಾರಾಣಿ, ಸಾಧುಕೋಕಿಲ, ಚಿಕ್ಕಣ್ಣ ಸೇರಿದಂತೆ ಬಹುತೇಕರು ಕಾಣಿಸಿಕೊಂಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ವಿಶೇಷ ಪಾತ್ರದಲ್ಲಿ ಅಭಿ ಜೊತೆಯಾಗಿದ್ದಾರೆ. ಮೇ 29  ಕ್ಕೆ ತೆರೆ ಮೇಲೆ ಅಭಿ ಮತ್ತು ತಾನ್ಯಾಹೋಪ್ ಜೋಡಿ ಯಾವ ರೀತಿ ಮೋಡಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp