ಚಂದನವನಕ್ಕೆ ಕಾಲಿಟ್ಟ ಮಜಾಭಾರತ ಶೋ ಸ್ಪರ್ಧಿ..!!

04-Apr-2019

ಕನ್ನಡದ ಬೆಸ್ಟ್ ರಿಯಾಲಿಟಿ  ಶೋ  ಮಜಾ ಭಾರತ ಸ್ಪರ್ಧಿಯೊಬ್ಬರು ಸದ್ಯ ಸ್ಯಾಂಡಲ್ ವುಟ್ ಗೆ ಎಂಟ್ರಿ ಕೊಟ್ಟಿದ್ದಾರೆ. ಅದೆಷ್ಟೋ ಮಂದಿ ತಂಗಿ ಪಾತ್ರಕ್ಕೆ ಆಡಿಷನ್ ಗೆ ಬಂದವರು ಹೀರೋಯಿನ್ಗಳಾಗಿದ್ದಾರೆ.  ಬ್ಯಾಕ್ ಡ್ಯಾನ್ಸರ್ ಆಗಿದ್ದವರು ಇಂದು ಖ್ಯಾತ ನಾಯಕಿಯರಾಗಿದ್ದಾರೆ. ಹಾಗೆ ಇಲ್ಲೊಬ್ಬಳು ನಕ್ಕು ನಗಿಸೋಕೆ ಅಂತ ಬಂದು ಇದೀಗ ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾಳೆ. ಮಜಾ ಭಾರತದಲ್ಲಿ ಎಲ್ಲರ ಮನ ಗೆದ್ದಿದ್ದ,ಕನ್ನಡಿಗರಿಗೆ ಇಷ್ಟವಾದ ಸ್ಪರ್ಧಿ ಆರಾಧನ ಭಟ್… ಓದುತ್ತಿರೋದು ಒಂಬತ್ತನೇ ತರಗತಿ. ಆದರೆ ನೋಡೋಕೆ ಮಾತ್ರ ಸಿನಿಮಾ ನಾಯಕಿರಿಗಿಂತಲೂ ಏನುಕಡಿಮೆ ಇಲ್ಲ.

ಆರಾಧನ ಭಟ್ ಗೆ 'ಪುಟಾಣಿ ಪವರ್‌' ಹೆಸರಿನ ಮಕ್ಕಳ ಚಿತ್ರದ ಪ್ರಮುಖ ಪಾತ್ರಧಾರಿಯಾಗಿ ಆ್ಯಕ್ಟ್ ಮಾಡಲು ಅವಕಾಶ ಸಿಕ್ಕಿದೆ.
ಕಲರ್ಸ್‌ ಸೂಪರ್‌'ನ ಮಜಾ ಭಾರತ ಶೋನಲ್ಲೂ ಭಾಗವಹಿಸಿದ್ದ ಆರಾಧನಾ ಅಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದರು. 'ಇದು ನನ್ನ ಕನಸು. ಪೋಷಕರ ಬೆಂಬಲದಿಂದಲೇ ಬಾಲನಟಿಯಾಗಿ ಬಣ್ಣ ಹಚ್ಚಿದ ದಿನಗಳು ಈಗ ಒಂದು ಹಂತಕ್ಕೆ ತಂದು ನಿಲ್ಲಿಸಿವೆ. ಇದೀಗ ಚಿತ್ರವೊಂದರಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುವಂತಹ ಅವಕಾಶ ಸಿಕ್ಕಿದೆ. ಓದಿನ ಜೊತೆಗೆ ನಟನೆಯೂ ನನ್ನುಸಿರು ಎನ್ನುವ ಆರಾಧನಾಗೆ ಸಿನಿಮಾದಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಕನಸಿದ್ಯಂತೆ.ಪುಟಾಣಿ ಪವರ್‌ ಚಿತ್ರ ಬುನಾದಿ ಹಾಕುವ ನಂಬಿಕೆಯಿದೆ' ಎಂದು ನಗು ಅರಳಿಸುತ್ತಾರೆ ಬಾಲಕಿ ಆರಾಧನಾ ಭಟ್‌.ಮಂಗಳೂರಿನ ರಾಜಗಿರಿ ಹಾಗೂ ಪದ್ಮಶ್ರೀ ದಂಪತಿಯ ಪುತ್ರಿಯಾದ ಆರಾಧನಾ ಭಟ್‌ ಅಪರೂಪದ ಪ್ರತಿಭೆ. ಈಗಾಗಲೇ ತುಳು  ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡ ಮಂಗಳೂರಿನ ಈ ಪುಟಾಣಿ ಕನ್ನಡದಲ್ಲಿ ಮತ್ತಷ್ಟು ಸಿನಿಮಾಗಳ ಹೀರೋಯಿನ್ ಆಗೋ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾಳೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp