ನಿಖಿಲ್ ಕುಮಾರಸ್ವಾಮಿ ರೆಬೆಲ್ ಸ್ಟಾರ್ ಅಂಬರೀಶ್ ಫ್ಯಾನ್ ಅಲ್ವಾ..? ಈ ಪ್ರಶ್ನೆ ಹುಟ್ಟೋದಕ್ಕೆ ಕಾರಣ ಏನ್ ಗೊತ್ತಾ..?

04-Apr-2019

ಲೋಕಸಭಾ ಚುನಾವಣೆಯ ಕಾವು ಗಾಂಧಿನಗರಕ್ಕೂ ಕೂಡ ತಟ್ಟಿರುವ ಆಗಿದೆ.. ಸ್ಯಾಂಡಲ್ ವುಡ್ ನ ಘಟಾನುಘಟಿಗಳು ಮಂಡ್ಯ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.. ಒಂದು ಕಡೆ ಸ್ಯಾಂಡಲ್ ವುಡ್ ಜಾಗ್ವಾರ್ ನಾಯಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.. ಇದೀಗ ನಿಖಿಲ್ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಅಭಿಮಾನಿಗಳ ಬಳಗ ದೊಡ್ಡದೇ ಇತ್ತು.. ಇದೀಗ ತರ್ಲೆ ನನ್ ಮಕ್ಳು ಮತ್ತು ಪತಿಬೇಕು ಡಾಟ್ ಕಾಮ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ರಾಕೇಶ್ ಸದ್ಯ ‘ಫ್ಯಾನ್ ಆಫ್ ರೆಬೆಲ್ ಸ್ಟಾರ್’ ಅನ್ನೋ ಸಿನಿಮಾವನ್ನು ಪ್ರಾರಂಭಿಸುವ ಸಿದ್ದತೆಯಲ್ಲಿದ್ದಾರೆ

ಸದ್ಯ ಮಂಡ್ಯ ಲೋಕಸಭಾ ಚುನಾವಣೆ ಇಂಡಿಯಾದಲ್ಲಿಯೇ ಕ್ರೇಜ್ ಕ್ರಿಯೇಟ್ ಮಾಡಿದೆ. ಈ ಸಮಯದಲ್ಲಿಯೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ರಾಕೇಶ್ ರಿಲೀಸ್ ಮಾಡಿದ್ದಾರೆ.. ಫ್ಯಾನ್ ಆಫ್ ರೆಬೆಲ್ ಸ್ಟಾರ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಕನ್ನಡಚಿತ್ರರಂಗದ ಎಲ್ಲಾ ಹೀರೋಗಳ ಮುಖಗಳನ್ನೂ ನಮೂದಿಸಲಾಗಿದೆ. ಆದರೆ ಈ ಲಿಸ್ಟಿನಲ್ಲಿ ಎಲ್ಲಿ ಹುಡುಕಿದರೂ ನಿಖಿಲ್ ಕುಮಾರಸ್ವಾಮಿಯವರ ಮುಖವೇ ಕಾಣಸಿಗುತ್ತಿಲ್ಲ. ಇದು ಉದ್ದೇಶಪೂರ್ವಕವಾಗಿಯೇ ಮಾಡಿರೋದಾ ಅಥವಾ ಬೈ ಮಿಸ್ಟೇಕ್ ಮಿಸ್ ಆಗಿಬಿಟ್ಟಿದೆಯಾ ಗೊತ್ತಿಲ್ಲ. ಕೆಲವೇ ನಿಮಿಷಗಳ ಹಿಂದೆ ಬಿಡುಗಡೆಯಾಗಿರುವ ಈ ಪೋಸ್ಟರ್ ಸದ್ಯ ಟಾಕ್ ಆಫ್ ದಿ ಟೌನ್ ಎನ್ನುವಂತೆ ಚರ್ಚೆಗೆ ಒಳಗಾಗಿದೆ.. ಮಂಡ್ಯದಲ್ಲಿ ಅಂಬರೀಶ್ ಅವರಿಗೆ ಹೆಚ್ಚು ಫ್ಯಾನ್ಸ್ ಇದ್ದರು.. ಆದರೆ ಈ ಸಿನಿಮಾ ಗೆ ನಾಯಕ ಯಾರು ಎಂಬುದು ಇನ್ನೂ ಚಿತ್ರತಂಡ ತಿಳಿಸಿಲ್ಲ… ಒಟ್ಟಾರೆಯಾಗಿ ರಾಜಕೀಯ ವಲಯದಲ್ಲಿ ಈ ವಿಷಯವು ಕೂಡ ಸೇರಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ…

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp