ರಾಧಿಕಾ ಪಂಡಿತ್ ಗೆ ಅಭಿಮಾನಿಗಳ ಒತ್ತಾಯ..!! ಯಾಕ್ ಗೊತ್ತಾ..?

05-Apr-2019

ರಾಕಿಂಗ್ ಸ್ಟಾರ್ ಮತ್ತು ಯಶ್ ಜೋಡಿಗೆ ಸದ್ಯ ಒಂದು ಮುದ್ದಾದ ಹೆಣ್ಣು ಮಗು ಇದೆ. ಈಗಾಗಲೇ ಈ ಸ್ಟಾರ್ ಜೋಡಿ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ  ರಾಧಿಕಾ ಪಂಡಿತ್ ಶಾರ್ಟ್ ಮೂವಿ ಲಾಂಚ್'ವೊಂದರ ಸಮಯದಲ್ಲಿ   ಫಸ್ಟ್ ಟೈಮ್  ಮಾತನಾಡಿದ್ದಾರೆ. ಇನ್ನೂ ಹೆಸರಿಡದ ಆ ಮುದ್ದು ಕಂದಮ್ಮನನ್ನು ಮಿಡಿಯಾಗೆ ತೋರಿಸಿಲ್ಲ ಯಾಕೆ ಎಂದು ಮಾದ್ಯಮದವರು ಕೇಳಿದ ಪ್ರಶ್ನೆಗೆ.... ರಾಧಿಕಾ ಪಂಡಿತ್  ಪ್ರತಿಕ್ರಿಯೆ ನೀಡಿದ್ದಾರೆ. ಕೆಲ ಮಾಧ್ಯಮಗಳಲ್ಲಿ ಒಂದಷ್ಟು ಸುದ್ದಿ ನೋಡಿದೆ. ಮಗುವಿಗೆ ಹೆಸರೇ ಇಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿಸಿ ಬಿಟ್ಟಿದ್ದಾರೆ. ಆದರೆ ಎಲ್ಲಾ ಸುಳ್ಳು ಎಂದು ರಾಧಿಕ ಪಂಡಿತ್ ತಿಳಿಸಿದ್ದರು..

ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ತಮ್ಮ ಮುದ್ದು ಮಗಳಿಗೆ ಇನ್ನೂ ನಾಮಕರಣ ಮಾಡಿಲ್ಲ. ಆದರೆ ಅಭಿಮಾನಿಗಳಿಗೆ ಮಾತ್ರ ಕ್ಯೂರಾಸಿಟಿ ಕಡಿಮೆಯಾಗಿಲ್ಲ. ಎಲ್ಲೇ ಹೋದರೂ ಅಭಿಮಾನಿಗಳು ಮಗಳಿಗೆ ಏನು ಹೆಸರಿಡ್ತೀರಿ ಎಂದು ಕೇಳೋದೇ ಆಗ್ಬಿಟ್ಟಿದೆ... ಅದರ ಜೊತೆಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮೂಲಕ ಮಗಳಿಗೆ 'ಯಶಿಕಾ' ಅಥವಾ ‘ರಾಶಿ’ ಎಂದು ಹೆಸರಿಡಿ ಎಂದು ಒತ್ತಾಯವನ್ನೂ ಮಾಡುತ್ತಿದ್ದಾರೆ. ಇದೀಗ ರಾಧಿಕಾ ತಮ್ಮ ಫೇಸ್ ಬುಕ್ ಪುಟದಲ್ಲಿ ಮಗಳ ಆಟಿಕೆ ಜತೆ ಆಡುವ ಫೋಟೋವನ್ನು ಪ್ರಕಟಿಸಿದ್ದು, ಬೋರ್ ಆದಾಗಲೆಲ್ಲಾ ಅವಳ ಆಟಿಕೆಗಳ ಜೊತೆ ಆಟ ಆಡ್ತೀನಿ ಎಂದು ಬರೆದುಕೊಂಡಿದ್ದಾರೆ.

ಇದನ್ನು ನೋಡಿ ಅಭಿಮಾನಿಗಳು ಮತ್ತೆ ನಿಮ್ಮ ಮಗಳಿಗೆ ಏನೆಂದು ಹೆಸರಿಡುತ್ತೀರಿ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಜೊತೆಗೆ ಅವಳ ಆಟಿಕೆ ಮಾತ್ರವಲ್ಲ, ಮಗಳ ಫೋಟೋ ಹಾಕಿ ಎಂದೂ ಒತ್ತಾಯಿಸುತ್ತಿದ್ದಾರೆ. ಒಟ್ಟಾರೆಯಾಗಿ ರಾಕಿಂಗ್ ಜೋಡಿಯ ಮಗಳ ಪೊಟೋವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. ಏನು ಹೆಸರಿಡುತ್ತಾರೋ ಗೊತ್ತಿಲ್ಲ.. ಆದರೆ ಅಭಿಮಾನಿಗಳ ಕ್ರೇಜ್ ಮಾತ್ರ ಜಾಸ್ತಿಯಾಗುತ್ತಲೆ ಇದೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp