ಹೆಬ್ಬುಲಿ ನಾಯಕಿ ಅಮಲಾ ಪೌಲ್ ನಟನೆಯಿಂದ ನಿರ್ಮಾಣದತ್ತ..!!

09-Apr-2019

ಪರಭಾಷೆಯಿಂದ ಬಂದು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸೈ ಎನಿಸಿಕೊಳ್ಳುವುದು ಕಷ್ಟವೇ ಸರಿ… ಹಾಗೇ ಸೈ ಎನಿಸಿಕೊಂಡವರಲ್ಲಿ ಹೆಬ್ಬುಲಿ ಚಿತ್ರದ ನಾಯಕಿ ಅಮಲಾ ಪೌಲ್ ಕೂಡ ಒಬ್ಬರು. ಹೆಬ್ಬುಲಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಕಡಿಮೆ ಅವಧಿಯಲ್ಲಿಯೇ ಸಿನಿ ಪ್ರೇಮಿಗಳ ಮನಸ್ಸಿಗೆ ಲಗ್ಗೆ ಇಟ್ಟರು. ಸ್ಯಾಂಡಲ್ ವುಡ್ ಸಿನಿಪ್ರೇಮಿಗಳ ಗಮನ ಸೆಳೆದ ನಟಿ ಅಮಲಾ ಪೌಲ್, ಸೌತ್ ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿ. ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ಯಶಸ್ವಿ ನಾಯಕಿಯಾಗಿರುವ ಅಮಲಾ, ಈಗ ನಟನೆಯಿಂದ ನಿರ್ಮಾಪಕಿಯಾಗುತ್ತಿದ್ದಾರೆ.

ಅಮಲಾ ಪೌಲ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ತಮ್ಮದೇ ಬ್ಯಾನರ್ ನಲ್ಲಿ ಚೊಚ್ಚಲ ಸಿನಿಮಾ ಆರಂಭಿಸಿದ್ದಾರೆ. ತಮ್ಮ ಮ್ಯಾನೇಜರ್ ಜೊತೆ ಸೇರಿ ನಿರ್ಮಾಣ ಸಂಸ್ಥೆ ಹುಟ್ಟುಹಾಕಿರುವ ಅಮಲಾ, ಹೊಸ ಸಿನಿಮಾಗೆ ಚಾಲನೆ ನೀಡಿದ್ದಾರೆ. ಮಲಯಾಳಂ ಭಾಷೆಯಲ್ಲಿ 'ಕದವೀರ್' ಎಂಬ ಥ್ರಿಲ್ಲರ್ ಸಿನಿಮಾ ಮಾಡುತ್ತಿದ್ದು, ಇದು ನೈಜ ಅನುಭವಗಳ ಕಥೆ ಹೊಂದಿದೆಯಂತೆ. ಅಭಿಲಾಷ್ ಪಿಳ್ಳೈ ಎಂಬುವರು ಈ ಚಿತ್ರಕ್ಕೆ ಕಥೆ ಬರೆದು, ನಿರ್ದೇಶನ ಮಾಡ್ತಿದ್ದಾರೆ. ಮತ್ತೊಂದೆಡೆ ತಮಿಳಿನಲ್ಲಿ ಎರಡು ಸಿನಿಮಾ, ಮಲಯಾಳಂನಲ್ಲಿ ಎರಡು ಸಿನಿಮಾ ಹಾಗೂ ಹಿಂದಿಯ ಒಂದು ಹೊಸ ಚಿತ್ರದಲ್ಲಿ ಅಮಲಾ ಪೌಲ್ ಅಭಿನಯಿಸುತ್ತಿದ್ದಾರೆ. ನಾಯಕಿಯಾಗಿ ಸಕ್ಸಸ್ ಕಾಣುತ್ತಿರುವ ನಟಿಯರ ಪೈಕಿ ಸಿನಿಮಾ ನಿರ್ಮಾಣಕ್ಕೂ ಮುಂದಾಗಿರುವ ನಟಿಯರು ಬಹಳ ಅಪರೂಪವಾಗಿದ್ದಾರೆ. ಆ ಪಟ್ಟಿಗೆ ಈಗ ಅಮಲಾ ಪೌಲ್ ಕೂಡ ಸೇರಿಕೊಂಡಿದ್ದಾರೆ. ಒಟ್ಟಿನಲ್ಲಿ ನಟನೆಯಿಂದ ನಿರ್ಮಾಣದತ್ತ ಮುಖ ಮಾಡಿರುವ ಅಮಲಾಗೆ ಯಶಸ್ಸು ಸಿಗಲಿ ಅನ್ನೋದು ಅಭಿಮಾನಿಗಳ ಆಶಯ.. ಕೇವಲ ನಟನೆ ಬಿಟ್ಟು ಎಲ್ಲಾ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಳ್ಳುವುದಕ್ಕೆ ನಾಯಕಿಯರು ಮುಂದಾಗಿದ್ದಾರೆ. ಹಾಗಾಗಿ ನಿರ್ಮಾಣಕ್ಕೆ ಕೈ ಹಾಕಿರುವ ಅಮಲಪೌಲ್ ಗೆ ಅಭಿಮಾನಿಗಳು ಆಲ್ ದಿ ಬೆಸ್ಟ್ ಹೇಳುತ್ತಿದ್ದಾರೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp