ರಾಘಣ್ಣನ ಮುಂದಿನ ಸಿನಿಮಾ ರಿಲೀಸ್’ಗೆ ಡೇಟ್ ಫಿಕ್ಸ್..

10-Apr-2019

ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಿದ್ದಾರೆ ರಾಘಣ್ಣ ಅಲಿಯಾಸ್ ರಾಘವೇಂದ್ರ ರಾಜ್ ಕುಮಾರ್. ಸುಮಾರು 14 ವರ್ಷಗಳ ನಂತರ ಮುಖಕ್ಕೆ ಬಣ್ಣ ಹಚ್ಚಿದ್ದಾರೆ. ಇತ್ತೀಚಿಗಂತೂ ಮಾಧ್ಯಮಗಳಲ್ಲಿ ಸದಾ ಸುದ್ದಿಯಾಗುತ್ತಲೇ ಇರುತ್ತಾರೆ. ಸಿನಿಮಾ ಕಿರುತೆರೆ, ದೇವಸ್ಥಾನ ಅಂತಾ ಸದಾ ಒಂದಿಲ್ಲೊಂದು ಕೆಲಸಗಳಲ್ಲಿ ಬ್ಯುಸಿ ಇರುವ ರಾಘಣ್ಣ ನಾಲ್ಕೈದು ವರ್ಷಗಳ ಹಿಂದೆ ಬದುಕುವ ಆಸೆಯನ್ನೇ ಬಿಟ್ಟಿದ್ದರಂತೆ. ಅದಕ್ಕೆ ಕಾರಣ ಅವರ ಆರೋಗ್ಯ ಮೇಲಿನಿಂದ ಮೇಲೆ ಕೆಡುತ್ತಾ ಬಂದಿದ್ದು. ಸ್ಟ್ರೋಕ್ ನಂತರ  ಮತ್ತೆ ಆರೋಗ್ಯವಾಗಿ ರಾಘವೇಂದ್ರ ರಾಜ್ ಕುಮಾರ್ ಸಿನಿಮಾ ಕಡೆ ಒಲವು ತೋರಿಸಿದ್ದಾರೆ. ಇತ್ತೀಚಿಗಷ್ಟೇ ಅಮ್ಮನ ಮನೆ ಸಿನಿಮಾಗೆ ಅಭಿಮಾನಿಗಳಿಂದ ಗುಡ್ ರೆಸ್ಪಾನ್ಸ್ ಕೂಡ ಸಿಕ್ಕಿತು.

ಅಷ್ಟಕ್ಕೆ ಸುಮ್ಮನಾಗದ ರಾಘಣ್ಣ ಆ್ಯಕ್ಟೀವ್ ಆಗಿದ್ದಾರೆ. 14 ವರ್ಷಗಳ ಬ್ರೇಕ್ ನಂತರ ರಾಘಣ್ಣ ನಟನೆಯ ಸಿನಿಮಾಗಳು ರಿಲೀಸ್ ಆಗೋಕೆ ಸಿದ್ಧವಾಗಿವೆ. ಆ ಚಿತ್ರಗಳ ಪೈಕಿ ಸಿದ್ಧವಿರೋ ಸಿನಿಮಾಗಳಲ್ಲಿ ತ್ರಯಂಬಕಂ ಸಿನಿಮಾ ಕೂಡ ಒಂದು. ನಿರ್ದೇಶಕ ದಯಾಳ್ ಪದ್ಮನಾಭನ್ ಆ್ಯಕ್ಷನ್ ಕಟ್ ಹೇಳಿರೋ ಚಿತ್ರ ಇದೇ ಏಪ್ರಿಲ್ 19ರಂದು ಚಿತ್ರ ತೆರೆಕಾಣಲಿದ್ದು ಚಿತ್ರದ  ಪ್ರಮೋಷನ್ ವೇಳೆ , ಅವರ ಪಾತ್ರದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ ರಾಘಣ್ಣ. `ತ್ರಯಂಬಕಂ’ ನಲ್ಲಿ ರಾಘಣ್ಣ ಜವಾಬ್ದಾರಿಯುತ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತೀ ಸಿನಿಮಾದಲ್ಲೂ ಹೊಸ ಹೊಸ ನಿರ್ದೇಶಕರ ಜೊತೆ ಕೆಲಸ ಮಾಡುವ ಅವರು ಹೊಸ ಹೊಸ ವಿದ್ಯೆ ಕಲಿಯುತ್ತಲೇ ಆ್ಯಕ್ಟಿಂಗ್ ಮಾಡ್ತಾ ಇರುತ್ತಾರೆ. ‘ಇದು ತುಂಬಾ ಕುತೂಹಲಭರಿತ ಸಿನಿಮಾ. ಸ್ಟಾರ್ಟಿಂಗ್‌ ನಿಂದ ಕೊನೆವರೆಗೂ ಕೂತು ನೋಡುವ ಹಾಗೆ ಸಿನಿಮಾ ಇದೆ. ಸಿನಿಮಾ ಸ್ಕ್ರಿಪ್ಟ್ನಲ್ಲೇ ನಾನು ಒಪ್ಪಿಗೆ ಸೂಚಿಸಿದೆ. ತಂದೆ, ಮಗಳು, ಬಾಯ್‌ಫ್ರೆಂಡ್ ಈ ಮೂರು ಪಾತ್ರಗಳು ಕಥೆಯನ್ನ ಸಾಗಿಸೋ ಸಿನಿಮಾ. ಅದ್ರಲ್ಲೂ ನನಗೆ ಇದು ಹೊಸ ಕ್ಯಾರೆಕ್ಟರ್. ಇದು ಹೀರೋ ಸಿನಿಮಾ ಅಲ್ಲಾ, ಪ್ರತೀ ಪಾತ್ರವೂ ಸಿನಿಮಾದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದೊಂದು ಥ್ರಿಲ್ಲಿಂಗ್ ಸ್ಟೋರಿ, ಖಂಡಿತಾ ನಿಮಗೆ ಇಷ್ಟವಾಗುತ್ತದೆ. ನೋಡಿ ಹರಸಿ ಎಂದರು.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp