ಕೆಜಿಎಫ್ ಸಿನಿಮಾ ನೋಡ್ಬೇಕಾ..? ಹಾಗಾದ್ರೆ ಹೀಗ್ ಮಾಡಿ..!!

05-Feb-2019

ಎರಡು ವರ್ಷಗಳಿಂದ ಬೇರೆ ಯಾವ ಸಿನಿಮಾಕ್ಕೂ ಸಹಿ ಮಾಡದೇ ಕೆಜಿಎಫ್ ಒಂದಕ್ಕೇ ಶ್ರಮವಹಿಸಿದ ಯಶ್ ಸದ್ಯ ನ್ಯಾಷನಲ್ ಹೀರೋ ಆದರು. ಪಾಕ್ ನಲ್ಲಿ ರಿಲೀಸ್ ಆಗಿ ವಿದೇಶಿ ಅಭಿಮಾನಿಗಳ ಮನ ಕದ್ದರು. ಸದ್ಯ 'ಕೆಜಿಎಫ್‌' ಹಲವು ದಾಖಲೆಗಳನ್ನು ಮುರಿದಿದೆ. ಕೋಟಿ ಕೋಟಿ ಹಣ ಬಾಚಿಕೊಂಡ ಕೆಜಿಎಫ್ ಸದ್ಯ ಮತ್ತೊಂದು ದಾಖಲೆ ಬರೆಯೋಕೆ ಮುಂದಾಗಿದೆ. ಕನ್ನಡ ಚಿತ್ರರಂಗದಲ್ಲಿಯೇ ಇದೇ ಮೊದಲು ಐದು ಭಾಷೆಗಳಲ್ಲಿ ಏಕ ಕಾಲದಲ್ಲಿಯೇ ರಿಲೀಸ್ ಆಗಿದೆ. ಪಾಕ್ ನಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿ ಷೋ ಪೂರೈಸಿದೆ. ಫೆ. .5ರಿಂದ ಅಂದರೆ ಇಂದಿನಿಂದ ಅಮೆಜಾನ್‌ ಪ್ರೈಮ್‌ ಆ್ಯಪ್ನಲ್ಲಿ ಪ್ರಸಾರವಾಗಲಿದೆ.

ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಎಲ್ಲಾ ಆವೃತ್ತಿಗಳೂ ಅಮೆಜಾನ್‌ನಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರವೊಂದು ಬಿಡುಗಡೆಯಾಗಿ ಐವತ್ತು ದಿನ ಪೂರೈಸುವ ಮೊದಲೇ ಡಿಜಿಟಲ್‌ ಪ್ಲಾಟ್‌ಫಾಮ್‌ರ್‍ನಲ್ಲಿ ಪ್ರಸಾರಗೊಳ್ಳುತ್ತಿರುವುದು ಇದೇ ಮೊದಲು. ಕೆಜಿಎಫ್‌ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲೇ ಅಮೆಜಾನ್‌ ಪ್ರೈಮ್‌ ಸುಮಾರು 17 ಕೋಟಿ ರುಪಾಯಿ ನೀಡಿ ಡಿಜಿಟಲ್‌ ಹಕ್ಕು ಪಡೆದುಕೊಂಡಿತ್ತು. ಆ ಪ್ರಕಾರವೇ ಇದೀಗ ಸಿನಿಮಾ ಅಮೆಜಾನ್‌ನಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರಗಳು ಐವತ್ತು ದಿನ, ನೂರು ದಿನ ಓಡಿತು ಎಂಬ ಲೆಕ್ಕಾಚಾರ ಒಂದು ಕಾಲದಲ್ಲಿ ಮಹತ್ವದ್ದಾಗಿತ್ತು. ಆದರೆ ಕೆಜಿಎಫ್ 50 ದಿನಗಳ ಪೂರೈಸುವ ಮುನ್ನವೇ ಅಮೇಜಾನ್ ಆ್ಯಪ್ ನಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಇದೀಗ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿರುವ 'ಕೆಜಿಎಫ್‌' ಚಿತ್ರ ಆಯಪ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಹೊಸ ಥರ ಸಂಪ್ರದಾಯಕ್ಕೆ ನಾಂದಿ ಹಾಡಿದೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp